ಬೆಂಗಳೂರು:- ಪಾಕ್ ಪರ ಘೋಷಣೆ ಕೂಗಿದವರಿಗೆ ಕೆಟ್ಟ ಪದ ಬೈದ ಯತ್ನಾಳ್ ಬೆಂಬಲಕ್ಕೆ ಸ್ಪೀಕರ್ ಖಾದರ್ ನಿಂತ ಘಟನೆ ಜರುಗಿದೆ.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಯತ್ನಾಳ್, ದೇಶದ ಅನ್ನ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುವವರು *** ಎಂದಿದ್ದಾರೆ. ಈ ವೇಳೆ ಯತ್ನಾಳ್ ಬಳಸಿದ ಪದಗಳಿಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಾಗಾದರೆ ನಾನು ಕೂಡಾ ಸೂ… ಮಗ, ಬೋ… ಮಗ ಎಂದು ಮಾತನಾಡುತ್ತೇನೆ ಎಂದ ಶಾಸಕ ರಾಯರೆಡ್ಡಿ ಹೇಳಿದ್ದಾರೆ.
ಚರ್ಚೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ‘ಯತ್ನಾಳ್ ಅವರು ನಿಮ್ಮನ್ನು (ಕಾಂಗ್ರೆಸ್ ನಾಯಕರನ್ನು) ಬೈಯ್ದಿಲ್ಲ. ಅವರು ಪಾಕಿಸ್ತಾನ ಪರ ಇರುವವರನ್ನು ಬೈದಿದ್ದಾರಷ್ಟೆ. ಪಾಕ್ ಪರ ಘೋಷಣೆ ಕೂಗುವವರಿಗೆ ನೀವು ಯಾವುದೇ ಪದ ಬಳಕೆ ಮಾಡಿದರೂ ನನ್ನ ಅನುಮತಿ ಇದೆ’ ಎಂದು ಹೇಳಿದರು. ಈ ವೇಳೆ, ಎಲ್ಲೋ ಒಂದು ಕಡೆ ನಿಮ್ಮಂತಹ ದೇಶಭಕ್ತರು ಇನ್ನೂ ಇದ್ದಾರೆ ಎಂದು ಯತ್ನಾಳ್ ಹೇಳಿದರು.
ಮತ್ತೆ ಮಾತು ಮುಂದುವರಿಸಿದ ಯತ್ನಾಳ್, ‘ಇನ್ನೇನು ಅವರನ್ನು (ಪಾಕ್ ಪರ ಘೋಷಣೆ ಕೂಗುವವರನ್ನು) ಮುತ್ತೈದೆ ಮಕ್ಕಳು, ಮೈ ಬ್ರದರ್ಸ್ ಎನ್ನಬೇಕಾ’ ಎಂದು ವ್ಯಂಗ್ಯವಾಡಿದರು.