ಕೆ.ಆರ್.ಪುರ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ,ಕ್ರೀಡಾಸ್ಪೂರ್ತಿಯೊಂದಿಗೆ ಆಟವಾಡುವಂತೆ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಹೇಳಿದರು.
ಕ್ಷೇತ್ರದ ಬಸವನಪುರ ಜೆ.ಪಿ.ಬಾಯ್ಸ್ ವತಿಯಿಂದ ಪ್ರಥಮ ವರ್ಷದ ಬೈರತಿ ಬಸವರಾಜ್ ಕಬ್ಬಡ್ಡಿ ಕಪ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಸಹಜವಾಗಿ ಯುವಕರಲ್ಲಿ ಕ್ರೀಡಾಸಕ್ತಿ ಇರಬೇಕು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮಾನಸಿಕ ಆರೋಗ್ಯವನ್ನು ಪಡೆಯಬಹುದಾಗಿದೆ. ದೈಹಿಕವಾಗಿ ಆರೋಗ್ಯ ಸ್ಥಿತಿಯಲ್ಲಿದ್ದಾಗ ಮಾತ್ರ ಯಾವುದೇ ಕೆಲಸವನ್ನು ಉತ್ಸಾಹದಿಂದ ಮಾಡಬಹುದು ಎಂದು ಹೇಳಿದರು.
ಕ್ರೀಡೆಯಲ್ಲಿ ಜಾತಿ ಧರ್ಮ ವರ್ಗ ಎನ್ನುವುದು ಇರುವುದಿಲ್ಲ,ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸ್ನೇಹ ಸಂಬಂಧ ಹೆಚ್ಚಾಗುತ್ತದೆ, ಸ್ಪರ್ಧೆಯಲ್ಲಿ ಗೆದ್ದವರಿಗೆ ಯುವಕರಿಗೆ ಬಹುಮಾನ ಹಾಗೂ ಸೋತ ತಂಡಗಳಿಗೆ ಅನುಭವ ದೊರೆಯಲಿದೆ.
ಸೋಲು ಗೆಲುವಿನ ಮೆಟ್ಟಿಲಾಗಿದ್ದು,ಸೋಲಿಗೆ ಅಂಜದೆ ಕ್ರೀಡಾ ಸ್ಪೂರ್ತಿ ಮೆರೆಯುವಂತೆ ಸಲಹೆ ನೀಡಿದರು.
ಈಗ ವಾರ್ಡ್ ಮಟ್ಟದಲ್ಲಿ ನಡೆಯುತ್ತಿದ್ದು ಮುಂದಿನ ಬಾರಿಗೆ ಕೆ.ಆರ್ ಪುರ ಕ್ಷೇತ್ರದ ರಾಜ್ಯಾದ್ಯಂತ ಮಟ್ಟದಲ್ಲಿ ಕಬ್ಬಡಿ ಕ್ರೀಡೆಯನ್ನಾ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್, ಮುಖಂಡರಾದ ದುಶ್ಯಂತ್ ರಾಜ್,ರಾಕೇಶ್,ಯುವಮೋರ್ಚ ಮಂಜುನಾಥ್,ಜೆಪಿ ಬಾಯ್ಸ್ ತಂಡದ ಜಗನ್,ಶಿವ,ರಾಮಚಂದ್ರ ನಾಗೇಂದ್ರ ಮತ್ತಿತರು ಇದ್ದರು.