ಕೆಲವು ದಿನಗಳಿಂದ ಮಳೆಯಾದ ಪರಿಣಾಮ ವಾತಾವರಣ ತುಂಬಾ ತಣ್ಣಗೆ ಚಳಿ ಚಳಿಯಾಗಿ ಇದೆ. ಈ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಏನಾದರೂ ಖಾರವಾಗಿ ತಿನ್ನೋಣ ಅನ್ನಿಸುತ್ತಿದೆ. ಅದರಲ್ಲೂ ಆಗ ತಾನೇ ಮಾಡಿದ ಬಿಸಿ ತಿಂಡಿಯನ್ನು ಸವಿಯಲು ಇಷ್ಟ ಪಡುತ್ತೀರಾ. ಆದ್ದರಿಂದ ನಿಮಗಾಗಿ ಸುಲಭವಾಗಿ ಬಾನಾನ ಚಿಪ್ಸ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
1. ಬಾಳೆಕಾಯಿ – 2-4
2. ಅರಿಶಿನ ಪುಡಿ – ಚಿಟಿಕೆ
3. ಖಾರದ ಪುಡಿ – ಅರ್ಧ ಚಮಚ
4. ಗರಂ ಮಸಾಲ – ಅರ್ಧ ಚಮಚ
5. ಉಪ್ಪು – ರುಚಿಗೆ ತಕ್ಕಷ್ಟು
6. ಎಣ್ಣೆ – ಕರಿಯಲು
ಮಾಡುವ ವಿಧಾನ
* ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿಯಾಗಲು ಇಡಿ.
* ಬಾಳೆಕಾಯಿಯ ಹಸಿರು ಸಿಪ್ಪೆಯನ್ನು ತೆಗೆದು, ಸ್ಲೈಸ್ ಗಳನ್ನಾಗಿ ಮಾಡಿ.
* ಪ್ಯಾನ್ ಮೇಲೆ ಸ್ಲೈಸರ್ ಇಟ್ಟುಕೊಂಡು ಕಾದ ಎಣ್ಣೆಗೆ ಬಾಳೆಕಾಯಿಯ ಸ್ಲೈಸ್ ಗಳನ್ನು ಹಾಕಿ.
* ಬಾಳೆಕಾಯಿಯನ್ನು ಚೆನ್ನಾಗಿ ಫ್ರೈ ಮಾಡಿ, ಟಿಶ್ಯೂ ಪೇಪರ್ ಮೇಲೆ ಹಾಕಿ.
* ಅದಕ್ಕೆ ಉಪ್ಪು, ಅರಶಿನ ಪುಡಿ, ಖಾರದ ಪುಡಿ, ಗರಂ ಮಸಾಲ ಪುಡಿಯನ್ನು ಚುಮುಕಿಸಿ ಮಿಕ್ಸ್ ಮಾಡಿ, ಚೆನ್ನಾಗಿ ಕಲಸಿ.
* ಗರಿ ಗರಿಯಾದ ಬಾಳೆಕಾಯಿ ಚಿಪ್ಸ್ ಸವಿಯಲು ಸಿದ್ಧ, ಚಿಪ್ಸ್ ತಣ್ಣಗಾದ ಮೇಲೆ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ ಬಳಸಬಹುದು.