ಬೆಂಗಳೂರು:– ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಹೀಗಾಗಲೇ ಹೊಸ ಕ್ಯಾಲೆಂಡರ್ ಕೂಡ ಎಲ್ಲರಿಗೂ ತಲುಪಿದೆ. ಈ ವರ್ಷದಲ್ಲಿ ಎಷ್ಟು ರಜೆಗಳಿವೆ ಎಂಬುದರ ಮೇಲೆ. 2024ರಲ್ಲಿ ವಿವಿಧ ವಿಭಾಗಗಳ ನೌಕರರಿಗೆ ಲಭ್ಯವಿರುವ ಕೆಲಸದ ದಿನಗಳು, ರಜಾ ದಿನಗಳು ಎಷ್ಟು ಎಂಬುದನ್ನು ಇಲ್ಲಿ ತಿಳಿಯೋಣ
ಶಾಲೆಯಲ್ಲಿ ಕೆಲಸ ನಿರ್ವಹಿಸುವವರಿಗೆ: 52 ಭಾನುವಾರ, 21 ಸಾರ್ವತ್ರಿಕ ರಜೆಗಳು, 15 ಸಾಂರ್ದಭಿಕ ರಜೆಗಳು ಹಾಗೂ 2 ಪರಿಮಿತ ರಜೆಗಳು, 5 ಸ್ಥಳೀಯ ರಜೆಗಳು ಸೇರಿದರೆ 95 ರಜೆಗಳಿದ್ದು ಕೆಲಸ ದಿನಗಳು 271 ಇರುತ್ತವೆ.
ಬ್ಯಾಂಕ್ ನೌಕರರ ರಜೆಗಳು: 2024 ಅಧಿಕ ವರ್ಷವಾದ್ದರಿಂದ 366 ದಿನಗಳಿವೆ. 52 ಭಾನುವಾರ, 24 ಎರಡನೇ ಮತ್ತು ನಾಲ್ಕನೇ ಶನಿವಾರ, 21 ಸಾರ್ವತ್ರಿಕ ರಜಾದಿನಗಳು, ನೌಕರರಿಗಿರುವ 12 ವೈಯಕ್ತಿಕ ರಜೆಗಳು ಸೇರಿ ಒಟ್ಟು 109 ರಜಾದಿನಗಳಿವೆ. ಕೆಲಸದ ದಿನಗಳು 257 ಮಾತ್ರ. ಜನವರಿಯಲ್ಲಿ 13, 14 ಮತ್ತು 15 ಮೂರು ದಿನಗಳ ಹ್ಯಾಟ್ರಿಕ್ ರಜೆ ಬ್ಯಾಂಕ್ ನೌಕರರಿಗೆ ಲಭ್ಯ. ಫೆಬ್ರವರಿಯಲ್ಲಿ 29 ದಿನಗಳಿದ್ದರೂ ಒಂದೂ ಸಾರ್ವತ್ರಿಕ ರಜೆ ಇಲ್ಲ. ಮಾರ್ಚ್ನಲ್ಲಿ 8, 9, 10 ದಿನಾಂಕಗಳು ಬ್ಯಾಂಕ್ ನೌಕರರಿಗೆ ದೊರೆಯಲಿರುವ ಮತ್ತೊಂದು ಹ್ಯಾಟ್ರಿಕ್ ರಜಾ ಸರಣಿ. ಮಾರ್ಚ್ 29 ಗುಡ್ಫ್ರೈಡೇ ರಜೆ ಇದ್ದು 30ರಂದು ಹೋಲಿ ಸ್ಯಾಟರ್ಡೆ ಪರಿಮಿತ ರಜೆ ಹಾಕಿಕೊಂಡರೆ 31ರ ಭಾನುವಾರ ಸೇರಿ 3 ದಿನಗಳ ರಜೆಯನ್ನು ನೌಕರರು ಪಡೆಯಬಹುದು.