ಬೆಂಗಳೂರು : ದುನಿಯಾ ದಿನೇ ದಿನೇ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿದೆ. ಜನ ಸಾಮಾನ್ಯರುಂತೂ ಬದುಕೋಕೆ ಆಗ್ತಿಲ್ಲ. ಏಪ್ರಿಲ್ ಮೇ, ತಿಂಗಳು ಬಂದ್ರೆ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ. ಆದ್ರೀಗ ಕರೆಂಟ್ ಬಿಲ್ ನಂತೆ ಆಟೋ ಪ್ರಯಾಣ ದರವೂ ವರ್ಷಕ್ಕೊಮ್ಮೆ ಏರಿಸುವಂತೆ ಆಟೋ ಚಾಲಕರು ಮಾಲೀಕರು ಸರ್ಕಾರದ ಕದ ತಟ್ಟಿದ್ದಾರೆ. ಹಾಗಾದ್ರೆ ನಗರದಲ್ಲಿ ಇನ್ಮೇಲೆ ಆಟೋ ಪ್ರಯಾಣ ದುಬಾರಿಯಾಗುತ್ತಾ ಬನ್ನಿ ತೋರಿಸ್ತೀವಿ
ಬೆಂಗಳೂರು ಜನರಿಗೆ ಒಂದಲ್ಲ ಒಂದು ಶಾಕ್ ಕಾಡ್ತಾನೆ ಇದೆ. ಶ್ರೀ ಸಾಮಾನ್ಯರು ಮಧ್ಯಮ ವರ್ಗದ ಜನರಿಗಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಿಲ್ಲ. ಎಲ್ಲಾವೂ ತುಂಬನೇ ಕಾಸ್ಟ್ಲಿ . ಸರ್ಕಾರಿ ಇಲಾಖೆಗಳು ಅಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ ನಂದಿನಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೆ ಬಂದಿದೆ.ಆದ್ರೆ ಈಗ ಸರ್ಕಾರಿ ಇಲಾಖೆಗಳಂತೆ ನಮಗೂ ಪ್ರತಿ ವರ್ಷ ಆಟೋ ಪ್ರಯಾಣದ ಏರಿಸಿ ಅಂತ ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.
ಹೌದು.. ಒಂದು ಕಡೆ ಪೆಟ್ರೋಲ್ ರೇಟ್ ಇಳಿಕೆಯಾಗಿದೆ. ಸರ್ಕಾರ ವಾಹನ ಸವಾರರಿಗೆ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತೆ ರಿಲೀಫ್ ನೀಡಿದೆ. ಆದ್ರೆ, ಕರ್ಮಶಿಯಲ್ ಗ್ಯಾಸ್ ರೇಟ್ ಜಾಸ್ತಿ ಆಗಿದೆ. ತೈಲ ಬೆಲೆ ಇಳಿಕೆಯಾದ್ರೂ ಆಟೋ ಚಾಲಕರಿಗೆ ಗ್ಯಾಸ್ ರೇಟ್ ಹೊರೆಯಾಗ್ತಿವೆ. ಹೀಗಾಗಿ ಆಟೋ ಮೀಟರ್ ದರ ಏರಿಸುವಂತೆ ಸರ್ಕಾರದ ಕದ ತಟ್ಟಿದ್ದಾರೆ ಆಟೋ ಚಾಲಕರು ಹಾಗೂ ಮಾಲೀಕರು. ಈ ಸಂಬಂಧ ಆಟೋ ಯೂನಿಯನ್ಗಳು ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದು ಕೂಡಲೇ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ
ಪರಿಷ್ಕೃತ ಆಟೋ ದರ ನಗರದಲ್ಲಿ ಎಷ್ಟಿದೆ. ?
ಮೊದಲ 2 kmಗೆ 30 ರೂಪಾಯಿ ನಿಗದಿ
ನಂತರದ ಪ್ರತಿ km ಗೆ 15 ರೂಪಾಯಿ
ಮೊದಲ ಐದು ನಿಮಿಷ ಕಾಯುವಿಕೆ ಉಚಿತ
ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.
20 kg ವರೆಗೆ ಲಗೇಜ್ ಸಾಗಣೆ ಉಚಿತ
21 kg ಇಂದ 50 kg ವರೆಗೆ 5 ರೂ. ದರ ನಿಗದಿ
ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15)
ಬೆಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ 2013 ಹಾಗೂ 2021 ರಲ್ಲಿ ಆಗಿತ್ತು. ಕಳೆದ ಬಾರಿ ಒಂದು ಕೀ ಮೀಟರ್ಗೆ ಕೆವಲ 2 ರೂಪಾಯಿ ಅಷ್ಟೆ ಹೆಚ್ಚಿಸಿದ್ರು. ಕಳೆದ ಎರಡು ವರ್ಷಗಳಿಂದ ಯಾವದೇ ದರ ಪರಿಷ್ಕರಣೆ ಆಗಿಲ್ಲ . ಗ್ಯಾಸ್ ದರ ಕೂಡ ಜಾಸ್ತಿಯಾಗಿದೆ. ಬಿಡಿಬಾಗಗಳ ಖರೀದಿ ತುಂಬಾನೇ ಜಾಸ್ತಿಯಾಗಿದೆ. ಹೀಗಾಗಿ ಸರ್ಕಾರ ಕಾಲ ಕಾಲಕ್ಕೆ ದರ ಹೆಚ್ಚುಸುವ ಕೆಲಸ ಮಾಡಬೇಕು. ಪ್ರತಿ ವರ್ಷದ ಕಿ. ಮೀಟರ್ 2 ರಿಂದ 5 ವರಿಗೆ ಏರಿಕೆ ಮಾಡುವಂತೆ ಆಟೋ ಚಾಲಕರು ಬೇಡಿಕೆ ಇಟ್ಟಿದ್ದಾರೆ
ಬೆಂಗಳೂರು ನಗರದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಆಟೋಗಳಿವೆ. ಒಂದು ವೇಳೆ ದರ ಹೆಚ್ಚಳವಾದ್ರೆ ಪ್ರಯಾಣಿಕರಿಗೆ ಹೊರೆಯಾದ್ರೆ ಚಾಲಕರಿಗೆ ಅನುಕೂಲವಾಗಲಿದೆ. ಒಂದು ವೇಳೆ ಸರ್ಕಾರ ದರ ಹೆಚ್ಚಳ ಮಾಡಿದ್ರೆ ಆಟೋರಿಕ್ಷಾದಲ್ಲಿ ಓಡಾಡೋದಿದ್ರೆ ತುಸು ಜಾಸ್ತಿನೇ ಹಣ ಹೊಂದಿಸ್ಬೇಕು. ಲಗೇಜ್ ಹಿಡ್ಕೊಂಡ್ ಹೋಗ್ತೀರಿ ಅಂದ್ರೆ ಅದಕ್ಕೂ ಹೆಚ್ಚುವರಿ ಕೂಡಬೇಕು. ಆದ್ರೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.