ಆನ್ಲೈನ್ ಉದ್ಯೋಗ ವಂಚನೆಗಳಲ್ಲಿ ಸುಮಾರು ಶೇ 73 ರಷ್ಟು ಬೆಂಗಳೂರಿನಲ್ಲೇ ಎಂದು ವರದಿ ಹೇಳಿದೆ.
ಇಂಥ ಆನ್ಲೈನ್ ಉದ್ಯೋಗ ವಂಚನೆಗೆ ಒಳಗಾದವರಲ್ಲಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು ಶೇ 20-30 ರಷ್ಟಿದ್ದರೆ ಉಳಿದವರು ನಿರುದ್ಯೋಗಿಗಳು ಮತ್ತು ದಪವೀಧರರು ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶಗಳಿಂದ ತಿಳಿದುಬಂದಿದೆ.
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಆನ್ಲೈನ್ ಉದ್ಯೋಗ ವಂಚನೆಗಳು ನಿರಂತರವಾಗಿ ಹೆಚ್ಚಿವೆ. 2020 ರ ಜನವರಿ 1 ಮತ್ತು 2024 ರ ಮೇ 25 ರ ನಡುವೆ ಒಟ್ಟು 9,479 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6,905 ಪ್ರಕರಣಗಳು ಬೆಂಗಳೂರು ನಗರದಲ್ಲೇ ವರದಿಯಾಗಿವೆ ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳಿಂದ ಗೊತ್ತಾಗಿದೆ. ಕಳೆದ ವರ್ಷ 4,098 ಪ್ರಕರಣಗಳು ವರದಿಯಾಗಿದ್ದು, ಈ ವರ್ಷ (ಮೇ 25 ರವರೆಗೆ) ಸಂಖ್ಯೆ ಈಗಾಗಲೇ ಕಳೆದ ವರ್ಷದ ಅರ್ಧಕ್ಕಿಂತಲೂ ಹೆಚ್ಚು (2,185) ವರದಿಯಾಗಿವೆ
ಈ ವರ್ಷ ಒಟ್ಟು ಪ್ರಕರಣಗಳು 5,000 ದಾಟಬಹುದು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ