ಬೆಂಗಳೂರು ಹುಡುಗಿಯ ಕೈ ಹಿಡಿದ ನಟ ನಾಗಶೌರ್ಯ

ಫೋಟೋ ಗ್ಯಾಲರಿ

ಟಾಲಿವುಡ್ ನಟ ನಾಗ ಶೌರ್ಯ ಬೆಂಗಳೂರಿನ ಇಂಟಿರಿಯರ್ ಡಿಸೈನರ್ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ್ದಾರೆ.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ನಡೆದಿದ್ದು ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾನುವಾರ ಬೆಂಗಳೂರಿನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಳದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ನಾಗಶೌರ್ಯ ಮತ್ತು ಅನುಷಾ ಶೆಟ್ಟಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮದುವೆಯಾದರು.

ನಾಗಶೌರ್ಯ ಅವರ ಮದುವೆ ಸಮಾರಂಭದ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ಹಿತೈಷಿಗಳು ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ಗಾಗಿ ಡಯಟ್ ಹಾಗೂ ಅತಿಯಾದ ವ್ಯಾಯಾಮದಿಂದ ಅಸ್ವಸ್ಥಗೊಂಡಿದ್ದು ಇದೀಗ ನಾಗಶೌರ್ಯ ಚೇತರಿಸಿಕೊಂಡಿದ್ದಾರೆ.