ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಅಖಾಡ ರಾಜ್ಯದ ಹೈಓಲ್ಟೇಜ್ ಕ್ಷೇತ್ರವಾಗ್ತಿದ್ದು, ಡಿಕೆ ಬ್ರದರ್ಸ್ vs ಮೈತ್ರಿ ನಾಯಕರ ಜಿದ್ದಾಜಿದ್ದಿನ ಪ್ರತಿಷ್ಟೆಯ ಸಮರ ವೇದಿಕೆ ಸಜ್ಜಾಗಿದೆ. ಡಿಕೆ ಸುರೇಶ್ ಸೋಲಿಸಲು ಮಾಜಿ ಸಿಎಂ ಕುಮಾರಸ್ವಾಮಿ ಪಣ ತೊಟ್ಟಿದ್ರೆ, ಸಹೋದರನನ್ನು ಗೆಲ್ಲಿಸಲು ಡಿಕೆಶಿ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡ್ತಿದ್ದಾರೆ. RR ನಗರ, ಯಶವಂತಪುರ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿರೋ ಡಿಕೆ ಬ್ರದರ್ಸ್ ಅಪಾರ್ಟ್ಮೆಂಟ್ ನಿವಾಸಿಗಳ ಮತ ಸೆಳೆಯಲು ಸರ್ಕಸ್ ಮಾಡ್ತಿದ್ದಾರೆ.
ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ರಂಗೇರ್ತಿದೆ, ಅದರಲ್ಲೂ ಬೆಂಗಳೂರು ಗ್ರಾಮಾಂತರ ಅಖಾಡ ರಾಜ್ಯದ ಹೈ ಓಲ್ಟೇಜ್ ಕ್ಷೇತ್ರವಾಗ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್, ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ನಡುವರ ಜಿದ್ದಾಜಿದ್ದಿನ ಫೈಟ್ ನಡಿತಿದೆ. ಡಿಕೆ ಬ್ರದರ್ಸ್ ಗೆ ಮಣ್ಣುಮುಕ್ಕಿಸಿ ಸುರೇಶ್ ರನ್ನ ಸೋಲಿಸಲೇಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಸ್ವಾಮಿ ಪಣತೊಟ್ಟಿದ್ದಾರೆ, ಸಭೆಗಳ ಮೇಲೆ ಸಭೆ ಮಾಡ್ತಾ ಡಾಕ್ಟರ್ ಗೆಲುವಿನ ರಣತಂತ್ರ ಹೆಣೆಯುತ್ತಾ. ಡಿಕೆ ಬ್ರದರ್ಸ್ ಗೆ ಖೆಡ್ಡಾ ತೋಡ್ತಿದ್ದಾರೆ. ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿಸಿಎಂ ಡಿಕೆ ಶಿವಕುಮಾರ್ ಸಹೋದರನನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ..
ಇಂದು RR ನಗರ ವ್ಯಾಪ್ತಿಯಲ್ಲಿ ಬರುವ ಸಾಕೇತ್ ಹಿಲ್ಸ್ ಸೈಡ್, ಸುಗುಣ, ರಾಜಶ್ರೀ, ರಾಜ್ ವಿಸ್ತಾ, ಪೂರ್ಣಪ್ರಜ್ಞಾ ಸೇರಿದಂತೆ ಸುಮಾರು 10 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಗೆ ತೆರಳಿ ಮತ ಕೇಳಿದ್ರು. ಈ ವೇಳೆ ಮಾತನಾಡಿದ ಡಿಕೆಶಿ ನನ್ನ ಮತದಾರರ ಮನೆಗೆ ಬಂದಿದ್ದೇನೆ ಇಲ್ಲಿನ ಸಮಸ್ಯೆಗಳನ್ನ ಕೇಳೋರು ಯಾರು ಇಲ್ಲ. ಅದಕ್ಕೆ ನಾನೆ ಖುದ್ದಾಗಿ ಬಂದು ಜನರ ಸಮಸ್ಯೆಗಳನ್ನ ಆಲಿಸುತ್ತಿದ್ದೇನೆ ನನ್ನ ಮೇಲೆ ವಿಶ್ವಾಸ ಇಡಿ ಮತ ಹಾಕಿ ಎಂದು ಕೇಳಿದ್ದೆನೆ. ಈ ಬಾರಿ ಗೆಲ್ಲಿಸಿಕೊಡೊ ಭರವಸೆ ಕೊಟ್ಟಿದ್ದಾರೆ. ಸುರೇಶ್ ಈ ಕ್ಷೇತ್ರದ ಬಗ್ಗೆ ಕೇಂದ್ರದಲ್ಲೂ ಧ್ವನಿ ಎತ್ತುತ್ತಾನೆ, ಅವನನ್ನು ಗೆಲ್ಲಿಸಿ ನಿಮಗೆ ಎಲ್ಲಾ ರೀತಿಯಾದ ಸಹಕಾರ ನಿಡ್ತೇನೆ ಎಂದಿದ್ದೇನೆ ಎಲ್ಲರೂ ಒಪ್ಪಿದ್ದಾರೆ ಎಂದ್ರು ಡಿಕೆಶಿ.
ಒಟ್ನಲ್ಲಿ ಬೆಂಗಳೂರು ಗ್ರಾಮಾಂತರ ಅಖಾಡ ರಾಜ್ಯದಲ್ಲೇ ಹೈಓಲ್ಟೇಜ್ ಕ್ಷೇತ್ರವಾಗ್ತಿದ್ದು ಡಿಕೆಬ್ರದರ್ಸ್ vs ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿನ ಪ್ರತಿಷ್ಟೆಯ ಖಾಳಗ ಕುತೂಹಲ ಕೆರಳಿಸ್ತಿದೆ. ಡಿಕೆ ಬ್ರದರ್ಸ್ ರಾಜಕೀಯ ಜೀವನ ಮುಗಿಸಲು ಮೈತ್ರಿ ನಾಯಕರು ಪ್ಲಾನ್ ಮಾಡ್ತಿದ್ರೆ, ಅತ್ತ ಡಿಕೆಸಿ ಸಹೋದರನನ್ನು ಗೆಲ್ಲಿಸಿಕೊಂಡು ತಮ್ಮ ತಾಖತ್ತು ಏನು ಅಂತ ತೋರಿಸಲು ರಣವ್ಯೂಹ ರಚಿಸಿದ್ದಾರೆ. ಮಾಜಿ ಸಿಎಂ- ಹಾಲಿ ಡಿಸಿಎಂ ನಡುವಿನ ಖಾಳಗ ಎಲ್ಲಿಗೆ ಹೋಗಿ ಮುಟ್ಟುತ್ತೆ ಎಂಬುದನ್ನು ಕಾದುನೋಡಬೇಕಿದೆ..