ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡ್ರಗ್ಸ್ ವಿರುದ್ಧ ಬೆಂಗಳೂರು ಪೊಲೀಸರು ಸಮರ ಸಾರಿದ್ದಾರೆ. 8 ಮಂದಿ ವಿದೇಶಿ ಡ್ರಗ್ ಪೆಡ್ಲರ್ಗಳು ಸೇರಿ 10 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಐದೂವರೆ ಕೋಟಿ ಮೌಲ್ಯದ ಮಾದಕ ವಸ್ತುಗಳು ಸೀಜ್ ಮಾಡಲಾಗಿದ್ದು ಕಳೆದ 15 ದಿನಗಳಿಂದ ಪೆಡ್ಲರ್ಗಳ ವಿರುದ್ಧ ಕಾರ್ಯಾಚರಣೆಗೆ ತೊಡಗಿದ್ದಾರೆ.
ಕಾಡುಗೋಡಿ,ಕೆಆರ್ ಪುರಂ, ಸೋಲದೇವನಹಳ್ಳಿ, ಹೆಚ್ಎಸ್ಆರ್ ಲೇಔಟ್, ವೈಟ್ಫೀಲ್ಡ್ ಬಾಣಸವಾಡಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಯ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಡಿಎಂಎ ಕ್ರಿಸ್ಟೆಲ್ 3.806, ಕೋಕೆನ್ 50 ಗ್ರಾಂ,ಎಕ್ಸ್ಟಿಸಿ ಪಿಲ್ಸ್ 25, ಎಲ್ಎಸ್ಡಿ ಸ್ಟ್ರೀಪ್ಸ್ 50, ಗಾಂಜಾ 5 ಕೆಜಿ ವಶಕ್ಕೆ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ್ದ 1 ಕಾರು,3 ಬೈಕ್,9 9 ಮೊಬೈಲ್ ಸೀಜ್ ಮಾಡಿರುವ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ತನಿಖೆ ಮುಂದುವರಿಸಿದ್ದಾರೆ.