ಬೆಂಗಳೂರು:- ರಾಜಧಾನಿ ಪೊಲೀಸರೇ ಇಲ್ಲೊಮ್ಮೆ ನೋಡಿ. ರಾಜಧಾನಿ ಬೆಂಗಳೂರಿಗರೆ ಎಚ್ಚರ.. ಎಚ್ಚರ. ಈ ರಸ್ತೆಯಲ್ಲಿ ರಾತ್ರಿ ಸಂಚರಿಸೋ ವೇಳೆ ಹುಷಾರ್ ಆಗಿರಿ.
ಎಸ್,ಕತ್ತಲಾದ್ರೆ ಸಾಕು ಪುಂಡ ಯುವಕರು ಫುಲ್ ಆಕ್ಟಿವ್ ಆಗುತ್ತಿದ್ದಾರೆ. ಪುಂಡ ಯುವಕರಿಂದ ವಾಹನ ಸವಾರರ ಮೇಲೆ ಕಿರಿಕ್ ಮಾಡಿದ್ದಾರೆ. ಡೈರಿ ಸರ್ಕಲ್ ಬಳಿ ಪಾನಮತ್ತ ಯುವಕರಿಂದ ಡೈಲಿ ಕಿರಿಕ್ ಆರೋಪ ಕೇಳಿ ಬಂದಿದೆ.
ರಸ್ತೆಯಲ್ಲಿ ಸಂಚರಿಸೋ ವಾಹನಗಳ ಮೇಲೆ ತಡೆದು ಪುಂಡಾಟ ಮಾಡಿದ್ದಾರೆ. ಏಳೆಂಟು ಕಿಡಿಗೇಡಿಗಳಿಂದ ವಾಹನ ತಡೆದು ದಾಂದಲೆ ಮಾಡಿದ್ದಾರೆ. ಡೈರಿ ಸರ್ಕಲ್ ನ ಬ್ರಿಡ್ಜ್ ಬಳಿ ಘಟನೆ ಜರುಗಿದೆ. ಡಿಸೆಂಬರ್ 28ರ ರಾತ್ರಿ 1ಗಂಟೆ ವೇಳೆ ಘಟನೆ ಜರುಗಿದೆ
ಬೈಕ್ ಸವಾರರು ಪುಂಡರ ಪುಂಡಾಟ ವಿಡಿಯೋ ಸೆರೆ ಹಿಡಿದಿದ್ದಾರೆ. ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಪೊಲೀಸರಿಗೆ ಮನವಿ ಮಾಡಿದ್ದಾರೆ.