ಪುಣೆ: ವಿಶ್ವಕಪ್ ಕ್ರಿಕೆಟ್ನಿಂದ (World Cup Cricket) ಬಾಂಗ್ಲಾದೇಶದ (Bangladesh) ನಾಯಕ ಶಕೀಬ್ ಉಲ್ ಹಸನ್ (Shakib Al Hasan) ಔಟಾಗಿದ್ದಾರೆ.
ಸೋಮವಾರ ದೆಹಲಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ಶಕೀಬ್ ಅವರ ಎಡಗೈ ತೋರುಬೆರಳಿಗೆ ಗಾಯವಾಗಿತ್ತು. ಪಂದ್ಯದ ನಂತರ ಎಕ್ಸ್ರೇ ತೆಗೆದಾಗ ಮೂಳೆ ಮುರಿತವಾಗಿದ್ದು ದೃಢಪಟ್ಟಿತ್ತು.
ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ನವೆಂಬರ್ 11 ರಂದು ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಿಂದ ಹೊರಗುಳಿಯಲಿದ್ದಾರೆ
ಈ ಪಂದ್ಯದಲ್ಲಿ ಶಕೀಬ್ 2 ವಿಕೆಟ್ ಪಡೆಯುವುದರ ಜೊತೆ 82 ರನ್ (65 ಎಸೆತ, 12 ಬೌಂಡರಿ, 2 ಸಿಕ್ಸರ್) ಸಿಡಿಸಿದ್ದರು. ಶಕೀಬ್ ಮತ್ತು ನಜ್ಮುಲ್ ಮೂರನೇ ವಿಕೆಟಿಗೆ 149 ಎಸೆತಗಳಲ್ಲಿ 169 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲುವಿನ ಕಡೆಗೆ ತಿರುಗಿಸಿದ್ದರು. ಅತ್ಯುತ್ತಮ ಆಟದ ಪ್ರದರ್ಶನಕ್ಕೆ ಶಕೀಬ್ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.