ಬಾಂಗ್ಲಾದ ಚುನಾವಣ ಆಯೋಗ, ನ್ಯಾಯಾಂಗ, ಭದ್ರತೆ ಮತ್ತು ಆಡಳಿತದಲ್ಲಿ ಕೆಲವು ಪ್ರಮುಖ ಸುಧಾರಣೆಗಳನ್ನು ತಂದು ಅನಂತರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾಗುವುದು ಎಂದು ಬಾಂಗ್ಲಾ ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಘೋಷಿಸಿದ್ದಾರೆ.
ಈ ಮೂಲಕ ಸಾರ್ವತ್ರಿಕ ಚುನಾವಣೆ ಮತ್ತಷ್ಟು ವಿಳಂಬವಾಗುವ ಸುಳಿವನ್ನು ಯೂನುಸ್ ನೀಡಿದ್ದಾರೆ. ಈ ಮಧ್ಯೆ ಢಾಕಾದಲ್ಲಿ ಪೊಲೀಸ್ ಇಲಾಖೆಗೆ ಯೂನುಸ್ ಸರಕಾರಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. 32 ಪೊಲೀಸ್ ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ. ಈವರೆಗೆ ಒಟ್ಟು ವರ್ಗಾವಣೆಗೊಂಡ ಪೊಲೀಸರ ಸಂಖ್ಯೆ 50ಕ್ಕೆ ತಲುಪಿದೆ.