ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಅಲ್ಲಿಂದ ಓಡಿ ಹೋಗಿದ್ದ ಅವಾಮಿ ಲೀಗ್ನ ನಾಯಕ ಶವವಾಗಿ ಪತ್ತೆಯಾಗಿದ್ದಾರೆ.ಬಾಂಗ್ಲಾದೇಶದ ಗಡಿಯಲ್ಲಿರುವ ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಅವಾಮಿ ಲೀಗ್ ನಾಯಕನ ಕೊಳೆತ ಶವ ಪತ್ತೆಯಾಗಿದೆ.
ಮೇಘಾಲಯ ಪೊಲೀಸರು ಅವಾಮಿ ಲೀಗ್ ನಾಯಕ ಇಶಾಕ್ ಅಲಿ ಖಾನ್ ಪನ್ನಾ ಅವರ ಅರೆ ಕೊಳೆತ ದೇಹವನ್ನು ಜೈನ್ತಿಯಾ ಹಿಲ್ಸ್ ಜಿಲ್ಲೆಯ ತೋಟದಿಂದ ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 26 ರಂದು ಸಂಜೆ ಭಾರತ-ಬಾಂಗ್ಲಾದೇಶ ಗಡಿಯಿಂದ 1.5 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದು ಪನ್ನಾ ಅವರ ಪಾಸ್ಪೋರ್ಟ್ ಮೂಲಕ ಗುರುತಿಸಲಾಗಿದೆ ಎಂದು ಎಸ್ಪಿ ಗಿರಿ ಪ್ರಸಾದ್ ತಿಳಿಸಿದ್ದಾರೆ.
ಬಾಂಗ್ಲಾದೇಶ ಛತ್ರ ಲೀಗ್ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಪಿರೋಜ್ಪುರ ಜಿಲ್ಲೆಯ ಅವಾಮಿ ಲೀಗ್ನ ಪ್ರಮುಖ ಸದಸ್ಯರಾಗಿರುವ ಪನ್ನಾ ಅವರು ಆಗಸ್ಟ್ 5 ರಂದು ಶೇಖ್ ಹಸೀನಾ ಸರ್ಕಾರ ಪತನದ ನಂತರ ಪರಾರಿಯಾಗಿದ್ದರು.
ಬಾಂಗ್ಲಾ ಗಡಿ ದಾಟಲು ಪ್ರಯತ್ನಿಸುತ್ತಿರುವಾಗ ಪನ್ನಾ ಹೃದಯ ಸ್ತಂಭನಕ್ಕೆ ಒಳಗಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಶೇಖ್ ಹಸೀನಾ ಅವರ ಮಾಜಿ ಕ್ಯಾಬಿನೆಟ್ ಸಚಿವರು ಮತ್ತು ಸಹಾಯಕರ ವಿರುದ್ಧ ಇನ್ನೂ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ಮೂಲಕ ಅವರ ವಿರುದ್ಧ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 75 ಕ್ಕೆ ಏರಿದೆ ಆಗಿದೆ.