ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಆಗ್ರಹಿಸಿ ಕನ್ನಡಪರ ಹೋರಾಟಗಾರರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನ್ನಾಡಿದ್ದಾರೆ.
ಇಂದು ಬೆಳಗ್ಗೆ ರಾಮಚಂದ್ರಪ್ಪ ಅವರು ಗೃಹ ಸಚಿವ ಡಾ.ಜಿ ಪರಮೇಶ್ವರ್ರನ್ನು ಬೆಂಗಳೂರಲ್ಲಿ ಭೇಟಿಯಾದರು. ಭೇಟಿ ಬಳಿಕ ಮಾತಾಡಿದ ಅವರು.. ನಾಮಫಲಕದಲ್ಲಿ ಕನ್ನಡ ಅಗ್ರ ಸ್ಥಾನದಲ್ಲಿರಬೇಕು ಅನ್ನೋ ಕಾನೂನು ಇದೆ. ಕಾರ್ಮಿಕ ಇಲಾಖೆಯಲ್ಲಿ ಮೊದಲಿನಿಂದಲೂ ಕಾನೂನು ಇದೆ. ಮೊದಲು ಕನ್ನಡ ಇದ್ದು, ನಂತರ ಇಂಗ್ಲಿಷ್, ಹಿಂದಿ ಇರಬೇಕು. ಕನ್ನಡ ಕಡ್ಡಾಯ ಹಾಗೂ ಅದೇ ಅಗ್ರಸ್ಥಾನದಲ್ಲಿರಬೆಕು. ಕನ್ನಡ ಕಡ್ಡಾಯ ಪರಿಪಾಲನೆ ಆಗಬೇಕು. ಯಾವುದೇ ವಿವಾದ ಇರಬೇಕಾದ ಅಗತ್ಯ ಇಲ್ಲ ಎಂದರು.
ಕನ್ನಡ ಪರ ಆಂದೋಲಕ್ಕೆ ನನ್ನ ಬೆಂಬಲ ಇದೆ. ಆಂದೋಲನ ಹಿಂಸಾತ್ಮಕವಾಗದೇ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಈ ಆಂದೋಲನ ಸರಿಯಾದ ರೀತಿಯಲ್ಲಿ ಇರಬೇಕು. ಸರ್ಕಾರ ಪರಿಶೀಲಿಸಬೇಕು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಗತಿಯಲ್ಲಿನಡೆಸೇಕು. ಆಗ ಈ ರೀತಿಯ ಘಟನೆಗಳು ನಡೆಯಲ್ಲ. ಕನ್ನಡ ಅಗ್ರಸ್ಥಾನದಲ್ಲಿ ಇರಬೇಕು ಅಂತ ಕೇಳೋದ್ರಲ್ಲಿ ತಪ್ಪಿಲ್ಲ. ಕರ್ನಾಟಕದಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಇಲ್ಲ ಅಂದರೆ ಬೇರೆಲ್ಲೂ ಇರಲು ಸಾಧ್ಯವಿಲ್ಲ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಂಬಂಧಿಸಿದ ಇಲಾಖೆ ಸರಿಯಾಗಿ ಕಾನೂನು ಜಾರಿ ತಂದಿದ್ದರೆ ಇಂಥ ಪರಿಸ್ಥಿತಿ ಇರುತ್ತಿರಲಿಲ್ಲ. ಸರ್ಕಾರ ಸರಿಯಾಗಿ ಕಾನೂನು ಕ್ರಮವಹಿಸಿದ್ರೆ ಹೀಗೆ ಆಗುತ್ತಿರಲಿಲ್ಲ. ಕರ್ನಾಟಕ ಸಂಭ್ರಮ ಅಂತ ಆಚರಿಸುವ ಸಂದರ್ಭದಲ್ಲಿ ಕನ್ನಡ ನಾಮಫಲಕ ಹಾಕಿ ಅನ್ನುವುದೇ ನಾಚಿಕೆಯ ಸಂಗತಿ. ಇದನ್ನು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ತಿಂಗಳೊಳಗಾಗಿ ಎಲ್ಲ ಕಡೆ ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಬೇಕು. ಈ ವಿಚಾರದಲ್ಲಿ ಸರ್ಕಾರದ ಬದ್ಧತೆ ತೋರಿಸಬೇಕು ಎಂದು ಆಗ್ರಹಿಸಿದರು.