ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗ್ತಿದೆ. ವರುಣನ ಅಬ್ಬರಕ್ಕೆ ಕರಾವಳಿ ಮಂದಿ ಕಂಗಾಲಾಗಿದ್ದಾರೆ. ಮುಂಗಾರು ಪೂರ್ವ ಮಳೆಯೇ ಜನರ ಜೀವವನ್ನ ಹಿಂಡಿ ತಿನ್ನುತ್ತಿದೆ. ತುಂತುರು ಮಳೆಗೆ ಶಾಲೆ ಕಾಂಪೌಂಡ್ ಕುಸಿದು ವಿದ್ಯಾರ್ಥಿನಿ ಸಾವನ್ನಪ್ಪಿರೋ ಘಟನೆ ದ.ಕ ಜಿಲ್ಲೆ ಉಳ್ಳಾಲ ತಾಲೂಕಿ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಎನ್ಎಸ್ಎಸ್ ಶಿಬಿರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿ 7 ವರ್ಷದ ಶಾಜಿಯಾ ಗೇಟಿನ ಬಳಿ ಆಟವಾಡ್ತಿದ್ದಾಗ ಕಾಂಪೌಂಡ್ ಕುಸಿದು ಬಿದ್ದು ಅವಘಡ ನಡೆದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮಂಗಳೂರಿನ ಸಮುದ್ರ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.