ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ (New Parliament Building) ಜಗಜ್ಯೋತಿ ಬಸವಣ್ಣನವರ ವಚನಗಳಿಗೂ ಜಾಗ ಸಿಕ್ಕಿದ್ದು, ಕ್ನನಡದ ಕಂಪು ಹಬ್ಬಿದೆ. ಸಂಸತ್ ಭವನದ ಗೋಡೆಯ ಮೇಲೆ `ಕಳಬೇಡ.. ಕೊಲ ಬೇಡ.. ಹುಸಿಯ ನುಡಿಯಲು ಬೇಡ.. ಮುನಿಯಬೇಡ.. ಅನ್ಯರಿಗೆ ಅಸಹ್ಯಪಡಬೇಡ.. ತನ್ನ ಬಣ್ಣಿಸಬೇಡ.. ಇದಿರ ಹಳಿಯಲು ಬೇಡ’ ಎಂದು,
ಕನ್ನಡದಲ್ಲಿ ಬರೆಯಲಾದ ಬಸವಣ್ಣನವರ (Basavanna) ವಚನದ ಸಾಲುಗಳು ರಾರಾಜಿಸುತ್ತಿವೆ. ಜೊತೆಗೆ ಬಸವೇಶ್ವರರ ಫೋಟೋ ಕೂಡ ಇತರೆ ಮಹನೀಯರ ಫೋಟೋಗಳ ಜೊತೆ ಮಿಂಚುತ್ತಿದೆ. ಸಂಸತ್ ಭವನವನ್ನ ಒಮ್ಮೆ ಸುತ್ತಿ ಬಂದರೇ ಇಡೀ ಭಾರತ ದರ್ಶನವಾಗುತ್ತದೆ. ಪುರಾಣ, ಇತಿಹಾಸ, ನೆಲ-ಜಲ-ಭಾಷೆ ಎಲ್ಲವೂ ಕಣ್ಮುಂದೆ ಬರುವಂತೆ ಚಿತ್ರಿಸಲಾಗಿದೆ.