ನವೆಂಬರ್ 15ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ನವೆಂಬರ್ 15ರ ಒಳಗಡೆ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡುವಂತೆ ಬಿಬಿಎಂಪಿಯ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರ್ ಅವರು ಪರಾಮರ್ಶಿಸಿ ಕೂಡಲೇ ತೆರವಿಗೆ ಆದೇಶ ಮಾಡಬೇಕು ಅಂತಾ ಸೂಚಿಸಿದ್ದಾರೆ.
ಬಿಎಂಪಿಯ ದಾಖಲೆಗಳ ಪ್ರಕಾರ ಒಟ್ಟು 1,712 ರಾಜಕಾಲುವೆ ಒತ್ತುವರಿಯಾಗಿದೆ. ಈ ಪೈಕಿ ಬರೋಬ್ಬರಿ 1,348 ಪ್ರಕರಣಗಳು ಸರ್ವೇ ಹಾಗೂ ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯದಿಂದ ತೆರವಿಗೆ ಆದೇಶವಿರುವ 167 ಒತ್ತುವರಿಯನ್ನು ಸಹ ಬಿಬಿಎಂಪಿ ಇನ್ನೂ ತೆರವುಗೊಳಿಸಿಲ್ಲ.
ರಾಜಕಾಲುವೆ ಒತ್ತುವರಿ ವಿವರ ಹೀಗಿದೆ:
ವಲಯ ಒತ್ತುವರಿ ಸಂಖ್ಯೆ ತೆರವು ಆದೇಶ
ಪೂರ್ವ ವಲಯ 123 13
ಪಶ್ಚಿಮ ವಲಯ 46 0
ದಕ್ಷಿಣ ವಲಯ 46 0
ಕೋರಮಂಗಲ ಕಣಿವೆ 104 0
ಯಲಹಂಕ 359 55
ಮಹದೇವಪುರ 492 16
ಬೊಮ್ಮನಹಳ್ಳಿ 201 25
ಆರ್ ಆರ್ ನಗರ 104 13
ದಾಸರಹಳ್ಳಿ 287 45
ಒಟ್ಟು 1,712 167