ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಘೀ ಪ್ರಕರಣಗಳು ಭಾನುವಾರ ಒಂದೇ ದಿನ 12 ಜನರಲ್ಲಿ ಡೆಂಘೀ ಪಾಸಿಟಿವ್ ಕಂಡು ಬಂದಿದೆ.
ಇದರ ಬೆನ್ನಲ್ಲೇಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಡೆಂಘೀ ಪ್ರಕರಣ ಕಡಿಮೆ ಮಾಡಲು ಮೈಕ್ರೋ ಪ್ಲಾನ್ ತಯಾರಿ ಮಾಡಿರುವ ಪಾಲಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಲಕ್ಷ ಮನೆಗಳಿವೆ ಆದ್ರಲ್ಲಿ 12 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ವಿಸಿಟ್ ಮಾಡಲು ಪ್ಲಾನ್ ಮಾಡಿವೆ.
ಅಷ್ಟೂ ಮನೆಗಳಲ್ಲಿ 15 ದಿನಕ್ಕೊಮ್ಮೆ ಐಸಿ ಮಾಡಲು ಮುಂದಾದ ಬಿಬಿಎಂಪಿ ಇದಕ್ಕಾಗಿ 1400 ಆಶಾ ಕಾರ್ಯಕರ್ತೆಯರು ಮತ್ತು ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ನೇಮಕ ಮಾಡಲಾಗಿದೆ.
ಪ್ರತಿನಿತ್ಯ 80 ಡೆಂಘೀ ಟೆಸ್ಟ್ ಮಾಡುವ ಗುರಿ ಇದಕ್ಕಾಗಿ NSS ಕಾರ್ಯಕರ್ತರು ಮತ್ತು ನರ್ಸಿಂಗ್ ಸ್ಕೂಲ್ ನಲ್ಲಿ ಕೆಲಸ ಮಾಡುವವರನ್ನ ನೇಮಕ ಮಾಡಿಕೊಳ್ಳಲು ತಯಾರಿ ನಡೆಸಿದ್ದು ಇನ್ನು 8 ರಿಂದ 10 ದಿನದಲ್ಲಿ ನೇಮಕ ಮಾಡಿಕೊಂಡು ಡೆಂಘೀ ಟೆಸ್ಟ್ ಹೆಚ್ಚಿಸುವ ಗುರಿ ಹೊಂದಿದ ಬಿಬಿಎಂಪಿ
ಡೆಂಘೀ ಬಗ್ಗೆ ಬೆಂಗಳೂರಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದೇವೆ ಸದ್ಯ ಬಿಬಿಎಂಪಿಯಲ್ಲಿ 1100 ಟೀಂಗಳಿವೆ ಅವುಗಳನ್ನ 1500 ಟೀಂಗಳಿಗೆ ಹೆಚ್ಚಳ ಮಾಡುತ್ತೇವೆ ನಮ್ಮ ಬಳಿ ಸದ್ಯ 6000 NS1 ಕಿಟ್ ಇವೆ 100 ಎಲಿಸಾ ಟೆಸ್ಟ್ ಕ್ಯಾಪಾಸಿಟಿ ಇದೆ ಕಳೆದ ಭಾನುವಾರ 78 ಸ್ಯಾಂಪಲ್ ಗಳನ್ನ ಎಲಿಸಾ ಟೆಸ್ಟ್ ಮಾಡಿದ್ದೇವೆ ಆದ್ರಲ್ಲಿ 12 ಡೆಂಘೀ ಪ್ರಕರಣ ಪಾಸಿಟಿವ್ ಬಂದಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.