ಬೆಂಗಳೂರು: ಕಳೆದೆರಡು ದಿನಗಳಿಂದ ಅಲ್ಲಲ್ಲಿ ದರ್ಶನ ನೀಡ್ತಿರೋ ವರುಣನ ಎಫೆಕ್ಟ್ ನಿಂದ ರಾಜಧಾನಿ ಕೂಲ್ ಕೂಲ್ ಆಗಿದೆ.
ಸದ್ಯ ಮಳೆಗಾಲದ ಆರಂಭದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಮಳೆರಾಯನಿಂದ ಬೆಂಗಳೂರಿನ ಹಲವು ಏರಿಯಾಗಳ ಜನರು ನೀರು ನುಗ್ಗಿ ಸಂಕಷ್ಟ ಅನುಭವಿಸಿದ್ರು, ಅಲ್ಲದೇ 500 ಕ್ಕೂ ಹೆಚ್ಚು ಮರ-ಗಿಡಗಳು ಧರೆಗುರುಳಿ ಅವಾಂತರ ಸೃಷ್ಟಿಸಿತ್ತು.
ಇದೆಲ್ಲದರಿಂದ ಎಚ್ಚೆತ್ತ ಪಾಲಿಕೆ ಕೆಲ ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದೆ.
ಮಳೆಗಾಲಕ್ಕೆ ಪಾಲಿಕೆ ಸಿದ್ಧತೆಗಳೇನು?
- ರಾಜಕಾಲುವೆಗಳ ನೀರಿನ ಮಟ್ಟ ತಿಳಿಯಲು ಕಂಟ್ರೋಲ್ ರೂಂ ಕಾರ್ಯನಿರ್ವಹಣೆ
- ರಾಜಕಾಲುವೆಗಳಿಗೆ ಕ್ಯಾಮರಾ, ಸೆನ್ಸಾರ್ ಅಳವಡಿಕೆ
- ಬೆಂಗಳೂರಿನ ಬಹುತೇಕ ರಾಜಕಾಲುವೆಗಳ ಸ್ವಚ್ಛತೆ
- ಅಂಡರ್ ಪಾಸ್ ಗಳಲ್ಲಿ ಡೇಂಜರ್ ಲೈನ್ ಗುರ್ತಿಸಿ ಎಚ್ಚರಿಕೆ
- ನೀರು ತುಂಬುವ ರಸ್ತೆಗಳು, ಅಂಡರ್ ಪಾಸ್ ಗಳಲ್ಲಿ ನಿಗಾ
- ಮಳೆಗಾಲದ ಸಮಸ್ಯೆಗಳಿಗೆ 1533 ಸಹಾಯವಾಣಿ
ಸದ್ಯ ಇಷ್ಟೆಲ್ಲ ಕ್ರಮ ಕೈಗೊಂಡಿರೋದಾಗಿ ಪಾಲಿಕೆ ಹೇಳಿಕೊಳ್ತಿದ್ರೂ ಕೂಡ ನಗರದ ಕೆಲವೆಡೆ ರಾಜಕಾಲುವೆಗಳು ಗಬ್ಬೆದ್ದು ನಾರುತ್ತಿವೆ. ಶಾಂತಿನಗರ ಬಸ್ ನಿಲ್ದಾಣದ ಮುಂಭಾಗ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಾಜಕಾಲುವೆ ನಿರ್ವಹಣೆಯಿಲ್ಲದೇ ಗಬ್ಬೆದ್ದು ನಾರ್ತಿದೆ. ಹೂಳು ತುಂಬಿ ನೀರು ಹರಿಯಲು ಅಡೆತಡೆ ಇರೋದು ರಾಜಕಾಲುವೆ ಅಕ್ಕಪಕ್ಕದ ಏರಿಯಾಗಳ ತಗ್ಗು ಪ್ರದೇಶದ ಮೇಲೆ ಎಫೆಕ್ಟ್ ಮಾಡೋ ಸಾಧ್ಯತೆಯಿದೆ.