ಬಿಬಿಎಂಪಿ ಕಳಪೆ ಕಾಮಗಾರಿ ಮತ್ತೊಮ್ಮೆ ಬಯಲಾಗಿದೆ. ನಗರದ ಮೊದಲ ಸ್ಟೀಲ್ ಫ್ಲೈ ಓವರ್ ಜಾಯಿಂಟ್ ನಲ್ಲಿ ಏಕಾಏಕಿ ಗ್ಯಾಪ್ ಕಾಣಿಸಿಕೊಂಡಿದೆ. ಲೋಕಾರ್ಪಣೆಗೊಂಡ ಎರಡೇ ವರ್ಷದಲ್ಲಿ ಪಾಲಿಕೆಯ ಕಾಮಗಾರಿಯ ಅಸಲಿ ಬಣ್ಣ ಬಯಲಾಗಿದ್ದು. BBMP ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ..
ರಾಜ್ಯದ ಮೊದಲ ಸ್ಟಿಲ್ ಫ್ಲೈ ಓವರ್ ನಲ್ಲಿ ಕಳಪೆ ಕಾಮಗಾರಿ ಬಟಬಯಲಾಗಿದೆ. ಎರಡು ವರ್ಷ ಕಳೆಯುವ ಒಳಗೆ ಜಯಿಂಟ್ ನಲ್ಲಿ ಕಾಣಿಸಿಕೊಂಡ ದೊಡ್ಡ ಗ್ಯಾಪ್ ಆತಂಕಕ್ಕೆ ಕಾರಣವಾಗಿದೆ.
ಸಾಲು ಸಾಲ ವಿವಾದ, ಅಪಸ್ವರ, ಮಂದಗತಿಯ ಕಾಮಗಾರಿ ನಡುವೆ, ಬರೋಬ್ಬರಿ ಹತ್ತು ವರ್ಷಗಳ ನಂತರ ಓಪನ್ ಆದ ಶಿವಾನಂದ ಸರ್ಕಲ್ ಸ್ಟಿಲ್ ಫ್ಲೈ ಓವರ್ ಮತ್ತೆ ಸುದ್ದಿಯಾಗ್ತಿದೆ. 2022 ಆಗಸ್ಟ್ 15ರಂದು ಉದ್ಘಾಟನೆ ಆದ ಮೊದಲ ಸ್ಟಿಲ್ ಫ್ಲೈ ಓವರ್ ಗೆ ಪಾಲಿಕೆ ಬರೋಬ್ಬರಿ 50 ಕೋಟಿಗೂ ಅಧಿಕ ರೂಪಾಯಿ ವೆಚ್ಚ ಮಾಡಿತ್ತು.
ಲೋಕಾರ್ಪಣೆ ವೇಳೆ ಐವತ್ತು ವರ್ಷಕ್ಕೆ ಯಾವ ತೊಂದರೆಯೂ ಇಲ್ಲ ಅಂತ ಪಾಲಿಕೆ ಹೇಳಿತ್ತು. ಇದೀಗ ಲೋಕಾರ್ಪಣೆಗೊಂಡ ಎರಡೇ ವರ್ಷಕ್ಕೆ ಸೇತುವೆಯ ಪಿಲ್ಲರ್ ಗಳ ನಡುವಿನ ಅಂತರ ಹೆಚ್ಚಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ಎರಡು ಪಿಲ್ಲರ್ ಗಳ ನಡುವಿನ ಅಂತರ ಅದೇ ಸೇತುವೆಯ ಇತರೆ ಕಡೆಗಳಲ್ಲಿ ಇದಕ್ಕಿಂತ ಭಿನ್ನವಾಗಿದೆ. ಆದರೆ ಸದ್ಯ ಬಿರುಕು ಬಿಟ್ಟಿರುವ ಜಾಗದಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ಆದರೆ ಎಲ್ಲಾ ಪಿಲ್ಲರ್ ಗಳೂ ಕೂಡ ಅದೇ ರೀತಿಯಲ್ಲಿದೆ ಅಂತ ಸಮರ್ಥಿಸಿಕೊಂಡಿದ್ದಾರೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್.
2009ರಲ್ಲಿ ಪಾಲಿಕೆಯಿಂದ ಈ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಾಗಿತ್ತು. ಸಾಲು ಸಾಲು ವಿವಾದದ ನಡುವೆ ಜನರಆಕ್ರೋಶಕ್ಕೆ ಕಾರಣವಾಗಿದೆ. 2020ರಲ್ಲಿ ಬಸವಾರಜ ಬೊಮ್ಮಾಯಿ ಸರ್ಕಾರದಲ್ಲಿ ನಿರ್ಮಾಣಕ್ಕೆ ಮಧ್ಯವಸ್ಥಿಕೆ ವಹಿಸಿ ಅನುಮದೋನೆ ನೀಡಿತ್ತು. ಈ ವೇಳೆ ಹೈದರಾಬಾದ್ ಮೂಲಕ ಎಂವಿಆರ್ ಎಂಬ ಸಂಸ್ಥೆಗೆ ಗುತ್ತಿಗೆ ಕೊಟ್ಟಿತ್ತು. ಒಟ್ಟು 492 ಮೀಟರ್ ಉದ್ದದ ಉಕ್ಕಿನ ಮೇಲ್ಸೇತುವೆ 2022ರ ಆಗಸ್ಟ್ 15ಕ್ಕೆ ಲೋಕಾರ್ಪಾಣೆಗೊಂಡಿತ್ತು. ಇದೀಗ ಉದ್ಘಾಟನೆಗೊಂಡ ಎರಡು ವರ್ಷದ ಅಂತರದಲ್ಲಿ ಸೇತುವೆ ಬಾಯ್ತೆರದು ಕೂತಿದೆ.