ಕೂಲ್ ಕ್ಯಾಪ್ಟನ್ MS ಧೋನಿಗಾಗಿ BCCI IPL ನಿಯಮವನ್ನೇ ಬದಲಿಸಿದೆ. IPL 2025 ಸೀಸನ್-18 ರ ಮೆಗಾ ಹರಾಜು ನಿಯಮಗಳು ಹೊರಬಿದ್ದಿದೆ. ಈ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಗಳು ಈ ಬಾರಿಯ ಮೆಗಾ ಆಕ್ಷನ್ಗೂ ಮುನ್ನ ಒಟ್ಟು ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು.
ಹೀಗೆ ರಿಟೈನ್ ಮಾಡಿಕೊಳ್ಳುವ ಐವರು ಆಟಗಾರರಲ್ಲಿ ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೂ ಅವಕಾಶ ನೀಡಬಹುದು. ಆದರೆ ಈ ಬಾರಿ ಅನ್ಕ್ಯಾಪ್ಡ್ ಆಟಗಾರರ ನಿಯಮದಲ್ಲೂ ಬಿಸಿಸಿಐ ಬದಲಾವಣೆ ತಂದಿದೆ. ಅದು ಸಹ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಕೋರಿಕೆಯ ಮೇರೆಗೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದಾಗಿತ್ತು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಈ ನಿಯಮವನ್ನು ಮತ್ತೆ ಜಾರಿಗೊಳಿಸುವಂತೆ ಸಿಎಸ್ಕೆ ಫ್ರಾಂಚೈಸಿ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಮುಖ್ಯ ಕಾರಣ ಮಹೇಂದ್ರ ಸಿಂಗ್ ಧೋನಿ.
ಏಕೆಂದರೆ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗಿದೆ. ಹೀಗಾಗಿ ಈ ನಿಯಮ ಜಾರಿಯಾದರೆ ಸಿಎಸ್ಕೆ ಫ್ರಾಂಚೈಸಿಗೆ ಸ್ಟಾರ್ ಆಟಗಾರನನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಹೀಗಾಗಿ ಈ ನಿಯಮವನ್ನು ಮತ್ತೆ ಪರಿಚಯಿಸುವಂತೆ ಸಿಎಸ್ಕೆ ಆಗ್ರಹಿಸಿತ್ತು. ಅದರಂತೆ ನಿವೃತ್ತಿ ಘೋಷಿಸಿ 5 ವರ್ಷ ಕಳೆದಿರುವ ಆಟಗಾರರನ್ನು ಅನ್ಕ್ಯಾಪ್ಡ್ ಪಟ್ಟಿಗೆ ಪರಿಗಣಿಸಬಹುದು ಎಂಬ ನಿಯಮ ಈ ಬಾರಿಯ ಮೆಗಾ ಹರಾಜಿನಲ್ಲಿ ಅನ್ವಯವಾಗಲಿದೆ.
ಈ ಮೂಲಕ ಧೋನಿಯನ್ನು ಕಡಿಮೆ ಮೊತ್ತ ನೀಡಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಲು ಸಿಎಸ್ಕೆ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ. ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಸಿಎಸ್ಕೆ ಕಳೆದ ಸೀಸನ್ ಹರಾಜಿಗೂ ಮುನ್ನ 12 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಆದರೆ ಈ ಬಾರಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡರೆ ಕೇವಲ 4 ಕೋಟಿ ರೂ. ಮಾತ್ರ ನೀಡಿದರೆ ಸಾಕು.
ಇತ್ತ ಧೋನಿಯನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಉಳಿಸಿಕೊಂಡರೆ, ಮತ್ತೋರ್ವ ರಾಷ್ಟ್ರೀಯ ಆಟಗಾರನನ್ನು ದೊಡ್ಡ ಮೊತ್ತ ನೀಡಿ ರಿಟೈನ್ ಮಾಡಿಕೊಳ್ಳುವ ಅವಕಾಶ ಸಿಎಸ್ಕೆ ತಂಡಕ್ಕೆ ದೊರೆಯಲಿದೆ. ಇಂತಹದೊಂದು ಪ್ಲ್ಯಾನ್ ರೂಪಿಸಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಹಳೆಯ ನಿಯಮವನ್ನು ಜಾರಿಗೆ ತರುವಂತೆ ಬಿಸಿಸಿಐಗೆ ಮನವಿ ಮಾಡಿತ್ತು. ಇದೀಗ ಬಿಸಿಸಿಐ ಕೂಡ ಈ ನಿಯಮಕ್ಕೆ ಅಸ್ತು ಎಂದಿದೆ.