ಟೀಮ್ ಇಂಡಿಯಾ ತಂಡದ ಇಶಾನ್ ಕಿಶನ್-ಶ್ರೇಯಸ್ ಅಯ್ಯರ್ಗೆ BCCI ಬಿಗ್ ಶಾಕ್ ನೀಡಲಾಗಿದೆ.
ಇಶಾನ್ ಕಿಶನ್-ಶ್ರೇಯಸ್ ಅಯ್ಯರ್ ಅವರು ದೇಶೀಯ ರೆಡ್-ಬಾಲ್ ಪಂದ್ಯಾವಳಿಯನ್ನು ಕಡ್ಡಾಯವಾಗಿ ಆಡಬೇಕೆಂದು ಬಿಸಿಸಿಐನ ಆದೇಶದ ಹೊರತಾಗಿಯೂ ಇಬ್ಬರು ಬ್ಯಾಟರ್ಗಳು ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ, ಭಾರತದ ಈ ಇಬ್ಬರು ಸ್ಟಾರ್ಗಳು ಇದಕ್ಕಾಗಿ ಭಾರೀ ಬೆಲೆ ತೆರಬೇಕಾಗಿದೆ
ವರದಿಯ ಪ್ರಕಾರ, ಬಿಸಿಸಿಐ 2023-24ರ ಋತುವಿಗಾಗಿ ಬಿಸಿಸಿಐ ಕೇಂದ್ರ ಒಪ್ಪಂದಗಳಿಗೆ ಒಳಪಟ್ಟಿರುವ ಆಟಗಾರರ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಪದೇ ಪದೇ ಎಚ್ಚರಿಕೆ ನೀಡಿದರೂ ರಣಜಿ ಟ್ರೋಫಿ ಆಡದಿದ್ದಕ್ಕೆ ಶಿಕ್ಷೆಯಾಗಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಈ ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆಯಂತೆ. ಅಂದರೆ ಇವರಿಬ್ಬರು ವರ್ಷದ ಸಂಬಳವಾಗಿ ಬಿಸಿಸಿಯಿಂದ 1 ರೂಪಾಯಿ ಪಡೆಯುವುದಿಲ್ಲ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು 2023-24ರ ಸೀಸನ್ಗಾಗಿ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ, ಇದನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಕಿಶನ್ ಮತ್ತು ಅಯ್ಯರ್ ಆ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಬಿಸಿಸಿಐನ ಆದೇಶದ ಹೊರತಾಗಿಯೂ ಇವರು ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಿಲ್ಲ, ”ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.