ಬೆಂಗಳೂರು :- ಇತ್ತಿಚ್ಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಮಹಿಳೆಯರ ಪೋಟೋ ಡೀಪ್ ಪೇಕ್ ನಿಂದ ಹಿಡಿದು ಅಸಭ್ಯ ಕಮೆಂಟ್ ಹಾಕಿ ಗೌರವಕ್ಕೆ ಕುತ್ತು ತಂದು ಅವಮಾನ ಮಾಡ್ತಿದ್ದಾರೆ. ಹೀಗಾಗಿ ಇತಂಹವರ ವಿರುದ್ಧ ಮಹಿಳಾ ಆಯೋಗ ಈಗ ಪುಲ್ ಅಲರ್ಟ್ ಆಗಿದೆ
ರಾಜಕಾರಣಿಯಾಗಲಿ, ಜನಸಾಮಾನ್ಯರಾಗಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡೋ ಹಾಗಿಲ್ಲ. ಹಾಗೇನಾದ್ರೂ ಇನ್ಮುಂದೆ ಮಾತಾನಾಡಿದ್ರೆ ಸುಮೋಟೋ ಕೇಸ್ ಬೀಳುತ್ತೆ. ನೊಂದ ಮಹಿಳೆಯರೇ ಸುಮ್ಮನಿದ್ರೂ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಲು ಮಹಿಳಾ ಆಯೋಗ ಮುಂದಾಗಿದೆ. ಮಹಿಳೆಯರು ದೂರು ನೀಡದೆ ಇದ್ರೂ , ಆಯೋಗದಿಂದಲೇ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಿದೆ. ಮಹಿಳೆಯರಿಗೆ ಗೌರವ ನೀಡದವರ ವಿರುದ್ಧ ಸಮರ ಸಾರಿರುವ ಮಹಿಳಾ ಆಯೋಗ, ಹೇಳಿಕೆಗಳು ನೀಡಿದವರಿಗೆ ತಕ್ಷಣವೇ ನೋಟಿಸ್ ನೀಡಲು ಮುಂದಾಗಲಿದೆ ಎಂದು ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ
ಇತ್ತೀಚೆಗೆ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಸಿಎಂ HD ಕುಮಾರಸ್ವಾಮಿ, ಸಂಜಯ್ ಪಾಟೀಲ್ಗೆ ಮಹಿಳಾ ಆಯೋಗ ನೋಟಿಸ್ ನೀಡಿದೆ. ವಿಚಾರಣೆಗೆ ಆಯೋಗಕ್ಕೆ ಬರುವಂತೆ ಸೂಚನೆ ಕೊಟ್ಟಿದೆ. ಗ್ಯಾರೆಂಟಿಗಳಿಂದ ಹಳ್ಳಿ ಹಣ್ಮಕ್ಕಳು ದಾರಿ ತಪ್ಪಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ರು. ತುಮಕೂರು ಜಿಲ್ಲೆಯ ತುರವೇಕರೆಯಲ್ಲಿ ಪ್ರಚಾರದ ವೇಳೆ ಹೇಳಿಕೆ ನೀಡಿದ್ರು.ಇದಕ್ಕೆ ವಿರೋಧ ಕೇಳಿ ಬಂದಿತ್ತು. ಇದು ಮಹಿಳೆಯರ ಘನತೆಗೆ ಚಾರಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂ ಮಹಿಳಾ ಆಯೋಗ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದೆ