ಮೂಗಿನ ಒಳಭಾಗದಲ್ಲಿ ಕಂಡುಬರುವ ಕೂದಲನ್ನು ಸಂಪೂರ್ಣವಾಗಿ ತೆಗೆದುಬಿಡಬೇಕು ಇದರಿಂದ ಮೂಗಿನ ಸ್ವಚ್ಛತೆಗೆ ಅನುಕೂಲವಾಗುತ್ತದೆ ಎಂಬುದು ಕೆಲವರ ತಪ್ಪು ಅಭಿಪ್ರಾಯ. ಏಕೆಂದರೆ ಮೂಗು ಜೊತೆಗೆ ನಮ್ಮ ಆರೋಗ್ಯ ಇಂದು ಸ್ವಚ್ಛತೆಯಿಂದ ಕೂಡಿರುವುದು ಮೂಗಿನ ಒಳಭಾಗದಲ್ಲಿ ಕಂಡುಬರುವ ಕೂದಲು ಇರುವುದರಿಂದ ಮಾತ್ರ.
ಹಾಗಾಗಿ ಯಾವುದೇ ಕಾರಣಕ್ಕೂ ಇದನ್ನು ಸಂಪೂರ್ಣವಾಗಿ ತೆಗೆದು ಬಿಡುವ ಬಗ್ಗೆ ಆಲೋಚನೆ ಮಾಡಲು ಹೋಗಬಾರದು. ಒಂದು ವೇಳೆ ಹಾಗೂ ಕೂಡ ನೀವು ಈ ಒಂದು ಕೆಟ್ಟ ನಿರ್ಧಾರಕ್ಕೆ ಬಂದರೆ ನಿಮ್ಮ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಈ ನಿಮ್ಮ ಪ್ರಯತ್ನ, ಮೂಗಿನ ಸೋಂಕಿಗೆ ಕಾರಣವಾಗಬಹುದು
ನಿಮ್ಮ ಮೂಗಿನ ಹೊಳ್ಳೆಯಲ್ಲಿ ಅತ್ಯಂತ ವಿರಳವಾಗಿ ಸಣ್ಣ ಸಣ್ಣ ಕೂದಲು ಕಂಡು ಬರುತ್ತದೆ. ನಿರ್ಲಕ್ಷ್ಯ ವಹಿಸಿ ನೀವು ಇದನ್ನು ಒಂದು ವೇಳೆ ತೆಗೆದು ಬಿಡಬೇಕು ಎನ್ನುವ ನಿರ್ಧಾರ ಮಾಡಿ ಚಿಮಟದ ಸಹಾಯದಿಂದ ಅಥವಾ ಬೇರೆ ಯಾವುದೇ ರೂಪದಲ್ಲಿ ಈ ಕೂದಲನ್ನು ತೆಗೆಯುವ ಪ್ರಯತ್ನ ಒಮ್ಮೆಲೆ ಮಾಡಿದ್ದೆ ಆದರೆ ಅದರಿಂದ ತುಂಬ ದೀರ್ಘಕಾಲದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.
ಕೆಲವರಿಗೆ ಕೂದಲು ತೆಗೆದ ಜಾಗದಲ್ಲಿ ರಕ್ತ ಮತ್ತು ಕೀವು ಕಂಡುಬಂದು ಸೋಂಕುಕಾರಕ ರೋಗಾಣುಗಳು ಹೊರಗಿನ ಧೂಳು ಮತ್ತು ಕೊಳೆಯ ಜೊತೆ ಸೇರಿಕೊಂಡು ಸಂಪೂರ್ಣ ಮೂಗಿನ ಹೊಳ್ಳೆಯನ್ನು ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಅನ್ಯ ಕಣಗಳ ವಿರುದ್ಧ ರಕ್ಷಣೆಗಾಗಿ ಇರುವ ಮೂಗಿನ ಒಳಗಿನ ಕೂದಲನ್ನು ಸಂಪೂರ್ಣವಾಗಿ ಕಿತ್ತು ಹಾಕುವ ಬದಲು ಕೇವಲ ಉದ್ದವಾಗಿ ಬೆಳೆದಿರುವ ಕೂದಲಿನ ಭಾಗವನ್ನು ಕತ್ತರಿಸುವುದು ಒಳ್ಳೆಯದು.
ನಿಮ್ಮ ಮೂಗು ತುಂಬಾ ಸೂಕ್ಷ್ಮವಾದ ಭಾಗ ನೆನಪಿರಲಿ
ನಮ್ಮ ಮುಖದ ಭಾಗದಲ್ಲಿ ಸೂಕ್ಷ್ಮವಾದ ಭಾಗ ಎಂದರೆ ಅದು ನಮ್ಮ ಕಣ್ಣುಗಳು. ಆದರೆ ರಕ್ತ ಸಂಚಾರದ ವಿಚಾರಕ್ಕೆ ನೋಡಿಕೊಂಡರೆ ಕಣ್ಣು ಗಳಿಗಿಂತ ಸೂಕ್ಷ್ಮ ಎಂದರೆ ಅದು ನಮ್ಮ ಮೂಗು ಎಂದು ಹೇಳುತ್ತಾರೆ.
ಏಕೆಂದರೆ ಮೂಗಿನ ಅಂಚುಗಳಲ್ಲಿ ನೇರವಾಗಿ ರಕ್ತ ಸಂಚಾರವನ್ನು ನಮ್ಮ ಮೆದುಳಿಗೆ ವರ್ಗಾಯಿಸುವಂತಹ ರಕ್ತನಾಳಗಳು ಇರುವ ಕಾರಣ ಮೂಗಿನ ಹೊಳ್ಳೆಯಲ್ಲಿ ನಾವು ನಿರ್ದಾಕ್ಷಿಣ್ಯವಾಗಿ ಕೂದಲನ್ನು ತೆಗೆದರೆ ಅದರಿಂದ ಮೆದುಳಿಗೂ ಕೂಡ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ.
ಇದರಿಂದ ನಿಮಗೆ ಸಾವು ಕೂಡ ಸಂಭವಿಸಬಹುದು
ಮೇಲೆ ಹೇಳಿದಂತೆ ಮೂಗಿನ ಅಂಚಿನ ಭಾಗಗಳಿಂದ ಮತ್ತು ಚರ್ಮದ ಒಳ ಪದರಗಳಿಂದ ರಕ್ತನಾಳಗಳು ಮೆದುಳಿಗೆ ಸಂಪರ್ಕ ಮಾಡುತ್ತವೆ.ಹಾಗಾಗಿ ಒಂದು ವೇಳೆ ಮೂಗಿನ ಹೊಳ್ಳೆಯಿಂದ ಕೂದಲನ್ನು ತೆಗೆಯಲು ಮುಂದಾದರೆ, ಇದು ನೇರವಾಗಿ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಪ್ರಭಾವ ಬೀರುವ ಜೊತೆಗೆ ಮೆದುಳಿಗೆ ಉಂಟಾಗುವ ರಕ್ತ ಸಂಚಾರದಲ್ಲಿ ವ್ಯತ್ಯಾಸ ಮಾಡುತ್ತದೆ.
ಜೊತೆಗೆ ಮೂಗಿನ ಭಾಗದಿಂದ ನೇರವಾಗಿ ಸೋಂಕನ್ನು ಮೆದುಳಿಗೆ ವರ್ಗಾವಣೆ ಮಾಡುತ್ತದೆ. ಮೆದುಳಿನ ಮೇಲೆ ಒಂದು ರೀತಿಯ ಒತ್ತಡವನ್ನು ಉಂಟು ಮಾಡುವಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗುತ್ತದೆ ಎಂದು ಹೇಳಬಹುದು. ಹೀಗಾಗಿ ಕೆಲವೊಮ್ಮೆ ಇದರಿಂದ ವ್ಯಕ್ತಿಗೆ ಪಾರ್ಶ್ವವಾಯು ಕಂಡುಬರಬಹುದು ಅಥವಾ ಸಾವು ಕೂಡ ಸಂಭವಿಸಬಹುದು.
ಹಾಗಾದರೆ ನೀವು ಏನು ಮಾಡಬೇಕು?
ನಿಮ್ಮ ಮುಖದ ಮೇಲೆ ಸೂಕ್ಷ್ಮ ಭಾಗ ಎಂದು ಯಾವ ಅಂಗಗಳು ಇರುತ್ತವೆ ಅವುಗಳ ಬಗ್ಗೆ ಸ್ವಲ್ಪ ಜಾಗರೂಕತೆ ವಹಿಸಬೇಕು. ಯದ್ವಾತದ್ವಾ ನಡೆದುಕೊಳ್ಳಲು ಹೋಗಬಾರದು. ಒಂದು ವೇಳೆ ನೀವು ಮೂಗಿನ ಕೂದಲನ್ನು ತೆಗೆಯಬೇಕು ಎಂದುಕೊಂಡರೆ ಮೊದಲೇ ಹೇಳಿದ ಹಾಗೆ ಕೇವಲ ಮೂಗಿನ ಹೊರಭಾಗದಲ್ಲಿ ಬೆಳೆದು ಬಂದಿರುವ ಕೂದಲನ್ನು ಮಾತ್ರ ಕತ್ತರಿಯಿಂದ ಕತ್ತರಿಸಿ.