ಕೋಲಾರ: ಮನೆ ಮನೆಗೆ ಕುಮಾರಣ್ಣ ಪಂಚರತ್ನ ಯೋಜನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಕೋಲಾರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರು ಹೇಳಿದರು.
ನಗರದ ಗಾಂಧಿನಗರದಲ್ಲಿ ಜೆಡಿಎಸ್ ಪಕ್ಷದಿಂದ ಮನೆ ಮನೆ ಪ್ರಚಾರದ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದರು. ಯಾವುದೇ ಪಕ್ಷವಾಗಲಿ ಸ್ಥಳೀಯರಿಗೆ ಟಿಕೇಟ್ ನ್ನು ನೀಡಬೇಕು ಸ್ಥಳೀಯರಿಗೆ ಸ್ಥಳೀಯರ ಸಮಸ್ಯೆಗಳು ತಿಳಿದಿರುತ್ತದೆ ಸ್ಥಳೀಯರು ಅಭ್ಯರ್ಥಿಯಾದರೆ ಕ್ಷೇತ್ರದ ಅಭಿವೃದ್ದಿ ಮುಖ್ಯ ಎಲ್ಲಾ ಜಾತಿ ವರ್ಗದ ಜನರು ಜೆಡಿಎಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತಿದ್ದಾರೆ.
ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೆನೆ 15 ವರ್ಷಗಳಿಂದ ವಲಸೆ ಬಂದು ಇಲ್ಲಿ ಆಡಳಿತವನ್ನು ನಡೆಸುತ್ತಿದ್ದಾರೆ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
ನಾನು ಶಾಸಕನಾದ ಮೇಲೆ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಓದಗಿಸುತ್ತೆನೆ ಸ್ಥಳೀಯರ ಸಮಸ್ಯೆಗಳು ನಮಗೆ ಬಹಳ ಮುಖ್ಯ ಎಂದು ಹೇಳಿದರು.