ಧಾರವಾಡ : ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ರೈತ ಗಂಭೀರ ಗಾಯಗೊಂಡಿರುವ ಘಟನೆ ಕಲಘಟಗಿ ತಾಲೂಕಿನ ಈಚನಹಳ್ಳಿ ತಾಂಡಾದಲ್ಲಿ ಭಾನುವಾರ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಈಚನಹಳ್ಳಿ ತಾಂಡಾದ ನಿವಾಸಿ ಮಾರುತಿ ರಾಮಪ್ಪ ರಾಠೋಡ (೫೬) ಎಂಬುವವರೇ ಕರಡಿ ದಾಳಿಗೆ ಒಳಗಾದವರು. ರೈತ ಮಾರುತಿ ಜಮೀನುಗಳಿಗೆ ಬಂದಿದ್ದ ಮಂಗಳನ್ನು ಓಡಿಸಲು ಮುಂದಾದಾಗ ಏಕಾಏಕಿ ಕರಡಿ ದಾಳಿ ನಡೆಸಿದೆ ಎನ್ನಲಾಗಿದೆ.
ರೈತ ಮಾರುತಿ ಅವರಿಗೆ ತಲೆ ಭಾಗಕ್ಕೆ ಗಂಬೀರ ಗಾಯವಾಗಿದೆ. ತಕ್ಷಣ ಅವರನ್ನು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಸಾಗಿಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಈಚನಹಳ್ಳಿ ಗ್ರಾಮಕ್ಕೆ ಭೇಟಿ ಪರಿಶೀಲಿಸಿದ್ದಾರೆ.
