ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದು, ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿದೆ. ಈ ಮಧ್ಯೆ ರೇಣುಕಾ ಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಲಭ್ಯವಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್ಗೆ ಕರೆದುಕೊಂಡು ಹೋಗಿ ಅಲ್ಲಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ರೇಣುಕಾ ಸ್ವಾಮಿಗೆ ಸಾಕಷ್ಟು ಟಾರ್ಚರ್ ನೀಡಿದ್ದರು ಎಂಬುದು ಈಗಾಗಲೇ ರಿಪೋರ್ಟ್ ನಲ್ಲಿ ಗೊತ್ತಾಗಿದೆ.. ಈ ಟಾರ್ಚರ್ನಿಂದಲೇ ಅವರು ಮೃತಪಟ್ಟಿದ್ದರು. ಈಗ ಅವರು ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಪ್ರತಿಯೊಬ್ಬರ ಮನ ಕಲಕುವಂತಿದೆ,
ರೇಣುಕಾ ಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣಕ್ಕೆ ದರ್ಶನ್ ಸಿಟ್ಟಾಗಿದ್ದರು. ಉಗುರಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ, ದರ್ಶನ್ ಅವರು ಈ ವಿಚಾರವನ್ನು ಕಾನೂನಾತ್ಮಕವಾಗಿಯೂ ಬಗೆಹರಿಸಬಹುದಿತ್ತು. ಆದ್ರೆ ಕಾನೂನು ಕೈಗೊತ್ತಿಕೊಂಡ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ.
ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋ ಮಾತ್ರವಲ್ಲದೆ ಅವರು ಶವವಾಗಿ ಬಿದ್ದ ಫೋಟೋಗಳು ಸಿಕ್ಕಿವೆ. ಆರೋಪಿಗಳ ಮೊಬೈಲ್ನಲ್ಲಿ ಇದನ್ನು ಸೆರೆಹಿಡಿದುಕೊಳ್ಳಲಾಗಿತ್ತು. ಆ ಬಳಿಕ ಇದನ್ನು ಡಿಲೀಟ್ ಮಾಡಿದ್ದರು. ಈಗ ಈ ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ. ಚಾರ್ಜ್ಶೀಟ್ನಲ್ಲಿ ಈ ಫೋಟೋಗಳನ್ನು ಲಗತ್ತಿಸಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗಿದೆ.