ನವದೆಹಲಿ: ಹಾರ್ವರ್ಡ್ ಮತ್ತು ಆಕ್ಸ್ಫರ್ಡ್ನಂತಹ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದಿರುವ ಭಾರತದ ಅನೇಕ ವಕೀಲರು ಮತ್ತು ನ್ಯಾಯಾಧೀಶರು ಇಂಗ್ಲಿಷ್ನಲ್ಲಿ ಯೋಚಿಸುತ್ತಾರೆ ಮತ್ತು ಮಾತನಾಡುತ್ತಾರೆ. ಆದರೆ ಅವರು ತಮ್ಮ ಆಲೋಚನೆಗಳಲ್ಲಿ ನಡೆಗಳಲ್ಲಿ ‘ಭಾರತೀಯರು‘ ಆಗಿ ಇರುವುದು ಅಗತ್ಯ ಹಾಗೂ ಬಹಳ ಮುಖ್ಯ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಇಂಗ್ಲಿಷ್ ಮಾತನಾಡುವ ವಕೀಲರು ಸ್ಥಳೀಯ ಭಾಷೆಗಳಲ್ಲಿ ಮಾತನಾಡುವವರಿಗೆ ಹೋಲಿಸಿದರೆ ಹೆಚ್ಚು ಶುಲ್ಕವನ್ನು ಪಡೆಯುತ್ತಿರುವ ಬಗ್ಗೆಯೂ ಕಾನೂನು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿರುವ ಅನೇಕ ಒಳ್ಳೆಯ ನ್ಯಾಯಾಧೀಶರು ಹಾಗೂ ವಕೀಲರು ವಿದೇಶಿ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್(Harvard) ಹಾಗೂ ಆಕ್ಸ್ಫರ್ಡ್ಗಳಲ್ಲಿ (Oxford) ಶಿಕ್ಷಣ ಪಡೆದವರಾಗಿದ್ದು, ಅವರು ಮಾತು ಹಾಗೂ ಯೋಚನೆ ಕೂಡ ಇಂಗ್ಲೀಷ್ನಲ್ಲೇ ಇರುತ್ತದೆ. ಆದರೆ ಮೂಲದಲ್ಲಿ ಹಾಗೂ ಆಲೋಚನೆಯಲ್ಲಿ ಅವರು ಭಾರತೀಯರಾಗಿ ಉಳಿಯುವುದು ಬಹಳ ಅಗತ್ಯ. ಇದರಿಂದ ಅವರು ಬಹಳ ವಿನಮ್ರರಾಗಬಹುದು ಎಂದು ಕಾನೂನು ಸಚಿವ ಕಿರೆನ್ ರಿಜಿಜು ಹೇಳಿದರು.
ಕುತೂಹಲಕಾರಿ ಅಂಶವೆಂದರೆ ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ (Chief Justice of India) ಡಿ.ವೈ .ಚಂದ್ರಚೂಡ್ (DY Chandrachud) ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ (Harvard University) ಸ್ನಾತಕೋತ್ತರ ಪದವಿಯನ್ನು ಪೂರ್ಣಗೊ ಳಿಸಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ಮಾತನಾಡುವವರಿಗೆ ಹೋಲಿಸಿದರೆ ಇಂಗ್ಲಿಷ್ ಮಾತನಾಡುವ ವಕೀಲರು ಹೆಚ್ಚು ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ದೆಹಲಿ ನ್ಯಾಯಾಲಯದಲ್ಲಿ ಇಂಗ್ಲಿಷ್ನ ಮೇಲಿನ ಅಧಿಕಾರದ ಆಧಾರದ ಮೇಲೆ ವಕೀಲರಿಗೆ ಪಾವತಿಸುವ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಇಂಗ್ಲಿಷ್ ಚೆನ್ನಾಗಿ ಮಾತನಾಡುವ ವಕೀಲರಿಗಿಂತ ಭಾರತೀಯ ಭಾಷೆಗಳಲ್ಲಿ ಮಾತನಾಡುವ ವಕೀಲರು ಹೆಚ್ಚು ಸಮರ್ಥರಾಗಿದ್ದಾರೆ ಎಂಬ ಅಂಶವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ರಿಜಿಜು ಹೇಳಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಕೆಲವು ವಕೀಲರಿದ್ದಾರೆ, ಅವರ ಕಾನೂನು ಜ್ಞಾನವನ್ನು ಲೆಕ್ಕಿಸದೆ, ಅವರು ಉತ್ತಮ ಇಂಗ್ಲಿಷ್ ಮಾತನಾಡುತ್ತಾರೆ ಎಂಬ ಕಾರಣದಿಂದ ಹೆಚ್ಚು ಸಂಬಳ ಪಡೆಯುತ್ತಾರೆ. ನೀವು ಚೆನ್ನಾಗಿ ಇಂಗ್ಲಿಷ್ನಲ್ಲಿ ಮಾತನಾಡುತ್ತೀರಿ ಎಂಬ ಕಾರಣಕ್ಕಾಗಿ ನೀವು ಹೆಚ್ಚು ಹಣವನ್ನು ಪಡೆಯುತ್ತೀರಿ ಎಂಬುದು ಸರಿಯಲ್ಲ. ಸ್ವಲ್ಪ ಯೋಚಿಸಿ, ಮರಾಠಿ (Marathi), ಹಿಂದಿಯಲ್ಲಿ (Hindi) ಉತ್ತಮ ಹಿಡಿತ ಹೊಂದಿರುವ ವಕೀಲರಿದ್ದಾರೆ, ಆದರೆ ಅವರ ಶುಲ್ಕ ಕಡಿಮೆ ಇರುತ್ತದೆ, ಏಕೆಂದರೆ ಅವರಿಗೆ ಇಂಗ್ಲಿಷ್ನಲ್ಲಿ ಮಾತನಾಡಲು ಸಾಧ್ಯವಿಲ್ಲ, ಎಂದು ಅವರು ಹೇಳಿದರು. ಮುಂದೆ ಇಂತಹ ಪ್ರವೃತ್ತಿ ರಾಷ್ಟ್ರಕ್ಕೆ ಒಳ್ಳೆಯದಲ್ಲ, ಕಾನೂನು ಬಾಂಧವರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.