ಬಳ್ಳಾರಿ : ತೀವ್ರ ಕುತೂಹಲ ಕೆರಳಿಸಿದ್ದ ಸಂಡೂರಿನಲ್ಲಿ ಕಾಂಗ್ರೆಸ್ ಆಭ್ಯರ್ಥಿ ಅನ್ನಪೂರ್ಣ ತುಕಾರಂ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 18ನೇ ಸುತ್ತಿನಲ್ಲಿ ಕೈ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 9,568 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಇನ್ನೂ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಪರಾಜಿತ ಅಭ್ಯರ್ಥಿ ಬಂಗಾರಿ ಹನುಮಂತು , ಈ ಸೋಲಿನ ಹೊಣೆಯನ್ನು ನಾನು ಒತ್ತುಕೊಳ್ಳುತ್ತೇನೆ. ಯಾರ ಮೇಲೂ ಇದನ್ನು ಹೊರಿಸಲ್ಲ, ಕಾಂಗ್ರೆಸ್ ಹಣ ಬಲದಿಂದ ಈ ಚುನಾವಣೆ ಗೆದ್ದಿದೆ.
ಸ್ವತಃ ಸಿಎಂ ಸಿದ್ದರಾಮಯ್ಯ ಇಲ್ಲಿಯೇ ಠಿಕಾಣಿ ಹೂಡಿದ್ದರು. ಸಚಿವ ಶಿವರಾಜ ತಂಗಡಗಿ ಉಸ್ತುವಾರಿ ಹೊತ್ತಿದ್ದ ಪ್ರದೇಶ ಸೇರಿ ಸಚಿವರು ಇದ್ದ ಪ್ರದೇಶದಲ್ಲಿ ನಮಗೆ ಹಿನ್ನಡೆ ಆಗಿದೆ. ಅಂಕಿ-ಅಂಶಗಳ ಪ್ರಕಾರ ನಮಗೆ ಸೋಲೇ ಇಲ್ಲ. ಚುನಾವಣೆ ಹತ್ತಿರ ಇದ್ದಾಗ ಎಲ್ಲ ಮಹಿಳೆಯರ ಖಾತೆಗೆ ೨ ಸಾವಿರ ಹಣ ಹಾಕಿದರು. ವೋಟಿಗೆ ೨ ಸಾವಿರ ಕೊಟ್ಟು ಮತಗಳನ್ನು ಖರೀದಿ ಮಾಡಿದರು. ೨೦೨೮ ರಲ್ಲಿ ಸಂಡೂರಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. ನಾನು ಅಲ್ಲಿಯೇ ಮನೆ ಮಾಡಿ ಜನರ ಜತೆ ಇರುತ್ತೇನೆ ೨೦೨೮ರಲ್ಲಿ ಯಾರೇ ಅಭ್ಯರ್ಥಿ ಆಗಲಿ ಒಗ್ಗಟ್ಟಿನಿಂದ ತುಕಾರಾಂ, ಸಂತೋಷ ಲಾಡ್ ಅವರನ್ನು ಸೋಲಿಸುತ್ತೇವೆ ಎಂದಿದ್ದಾರೆ.