ಬೆಳ್ಳುಳ್ಳಿ ಅಡುಗೆಯಲ್ಲಿ ವ್ಯಾಪಕವಾಗಿ ಬಳಸುವ ಸಾಮಾನ್ಯ ಪದಾರ್ಥವಾಗಿದೆ. ಅದರ ಜೊತೆ ಜಪತೆಗೆ ಇದು ಹಲವಾರು ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳಿಂದ ಕೂಡಿದೆ ಎಂಬುದನ್ನು ನಾವು ತಿಳಿಯುವುದು ಅಗತ್ಯವಾಗಿದೆ. ಇನ್ನು ಬೇಯಿಸಿದ ಮತ್ತು ಹಸಿಯಾಗಿ ಬೆಳ್ಳುಳ್ಳಿಯನ್ನು ತಿನ್ನುವುದಕ್ಕಿಂತ ನೀರಿನಲ್ಲಿ ಬೆಳ್ಳುಳ್ಳಿಯನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ
ವೈರಲ್ ರೋಗಗಳ ಸಮಯದಲ್ಲಿ ಬೆಳ್ಳುಳ್ಳಿ ನೀರನ್ನು ಕುಡಿಯಿರಿ. ಏಕೆಂದರೆ ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ1, ಬಿ6, ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್ ಗಳಂತಹ ಪೋಷಕಾಂಶಗಳು ಇದ್ದು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.
ಜೀರ್ಣಕ್ರಿಯೆ ಸಮಸ್ಯೆ ಇರುವವರು ಪ್ರತಿದಿನ ಬೆಳ್ಳುಳ್ಳಿ ನೀರನ್ನು ಕುಡಿದರೆ ಉತ್ತಮ ಸುಧಾರಣೆ ಕಾಣಬಹುದು.
ಅಜೀರ್ಣ, ಹೊಟ್ಟೆ ನೋವು, ಗ್ಯಾಸ್ ಸೆಳೆತ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳು ಸಂಪೂರ್ಣವಾಗಿ ಗುಣವಾಗುತ್ತವೆ.
ಮಹಿಳೆಯರಿಗೆ ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹೆಚ್ಚು. ಅಂತಹ ಸಮಯದಲ್ಲಿ, ಬೆಳಿಗ್ಗೆ ಬೆಳ್ಳುಳ್ಳಿ ನೀರನ್ನು ಕುಡಿಯಿರಿ. ಇದು ರಕ್ತದ ಹರಿವನ್ನು ನಿಯಂತ್ರಿಸುತ್ತದೆ ಮತ್ತು ಹೊಟ್ಟೆ ನೋವನ್ನು ನಿವಾರಿಸುತ್ತದೆ.
ಕೆಮ್ಮು ಮತ್ತು ಶೀತಗಳನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಕೆಲವೊಮ್ಮೆ ಬೆಳ್ಳುಳ್ಳಿ ನೀರನ್ನು ಬಳಸಲಾಗುತ್ತದೆ ಎಂದು ತಜ್ಞರು ಒಪ್ಪಿಕೊಳ್ಳುತ್ತಾರೆ. ಬೆಳ್ಳುಳ್ಳಿಯನ್ನು ನಿಯಮಿತವಾಗಿ ಬಳಸುವುದರಿಂದ ವಯಸ್ಕರಲ್ಲಿ ಶೀತಗಳ ಆವರ್ತನವನ್ನು ಕಡಿಮೆ ಮಾಡಬಹುದು ಎಂದು ಒಂದು ಅಧ್ಯಯನವು ವರದಿ ಮಾಡಿದೆ, ಆದರೆ ರೋಗಲಕ್ಷಣಗಳ ಅವಧಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.