ಬೆಂಗಳೂರು, ಡಿಸೆಂಬರ್ 28: ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಬುಧವಾರ ತೆರಿಗೆ ಪಾವತಿಸದ ನಗರದ ಪ್ರತಿಷ್ಠಿತ ‘ಮಂತ್ರಿ ಮಾಲ್’ಗೆ (Mantri Mall) ಬೀಗ ಜಡಿದಿದ್ದಾರೆ. ಈ ಮೂಲಕ ತೆರಿಗೆ ಪಾವತಿಸದ ಬಾಕಿದಾರರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮವನ್ನು ಮುಂದುವರಿಸಿದೆ. ಮಾಲ್ ಒಳಗಿದ್ದ ಸುಮಾರು 200 ಅಂಗಡಿಗಳನ್ನು ಸಹ ಬಂದ್ ಮಾಡಲಾಗಿದೆ.
ಸುಮಾರು ತಿಂಗಳುಗಳಿಂದ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡಿರಲಿಲ್ಲ. ಒಟ್ಟು ಸುಮಾರು 51 ಕೋಟಿ ತೆರಿಗೆ ಹಣವನ್ನು ಮಂತ್ರಿ ಮಾಲ್ ನಿಂದ ಬಿಬಿಎಂಪಿಗೆ ತೆರಿಗೆ ಪಾವತಿ ಆಗಿರಲಿಲ್ಲ. ಈ ನಿಮಿತ್ತ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ಗೆ ಹಲವು ಭಾರಿ ನೋಟಿಸ್ ನೀಡಿದ್ದರು.
ಇದರೊಂದಿಗೆ ಮಂತ್ರಿ ಒಳಗಿನ ಎಲ್ಲ ಮಳಿಗೆಗಳಿಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ ಆಗಿತ್ತು. ಆದರೆ ಈ ಮಳಿಗೆಗಳಾಗಲಿ, ಇಲ್ಲವೇ ಮಂತ್ರಿ ಮಾಲ್ ಮಾಲೀಕರಾಗಿ ನೋಟಿಸ್ಗೆ ಉತ್ತರ ಕೊಡದೇ ನಿರ್ಲಕ್ಷಿಸಿದ್ದರು. ಅಲ್ಲದೇ ತೆರಿಗೆಯನ್ನು ಕಾಲ ಕಾಲಕ್ಕೆ ಕಟ್ಟಿರಲಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಲ್ ಮಾಲೀಕರಾದ ಬಾಕಿ ಬಿಲ್ ಫಾವತಿ ಕುರಿತು ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಮಧ್ಯೆ ಬಿಬಿಎಂಪಿ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿಸುವುದು ಸರಿಯಲ್ಲ. ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಹೀಗೆ ಮಾಡಿದ್ದಾರೆ ಎಂದು ಮಂತ್ರಿ ಮಾಲ್ ಮಾಲೀಕರು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.