ಅನಧಿಕೃತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಖಾಸಗಿ ಶಾಲಾ ವಾಹನಗಳ ಬಳಿಕ ನೀರಿನ ಟ್ಯಾಂಕರ್ಗಳಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಸಂಚಾರ ನಿಯಮ ಉಲ್ಲಂ ಸಿದ ನೀರಿನ ಟ್ಯಾಂಕರ್ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ರುವ ನಗರ ಸಂಚಾರ ಪೊಲೀಸರು ಜ.30ರಂದು 595 ಪ್ರಕರಣಗಳನ್ನು ದಾಖಲಿಸಿ, 3,33,500 ರೂ. ದಂಡ ಸಂಗ್ರಹಿಸಿದ್ದಾರೆ.
ಸಮವಸ್ತ್ರ ಧರಿಸದೇ ಚಾಲನೆ ವಿರುದ್ಧ 252 ಪ್ರಕರಣ ದಾಖಲಿಸಿ 12,600 ರೂ. ದಂಡ, ಸೀಟ್ ಬೆಲ್ಟ್ ಧರಿಸದಿರುವುದಕ್ಕೆ 40 ಪ್ರಕರಣ-20 ಸಾವಿರ ರೂ. ದಂಡ, ನೋಂ ಎಂಟ್ರಿ 134 ಕೇಸ್-67 ಸಾವಿರ ರೂ. ದಂಡ, ದೋಷಪೂರಿತ ನಂಬರ್ ಪ್ಲೇಟ್ 48 ಪ್ರಕರಣ-24 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ ಲೇನ್ ಶಿಸ್ತು ಉಲ್ಲಂಘಿಸಿದ 6 ಪ್ರಕರಣಗಳಲ್ಲಿ 3 ಸಾವಿರ ರೂ., ನಿಲುಗಡೆ ನಿಷೇಧ 64 ಪ್ರಕರಣ- 64 ಸಾವಿರ ರೂ., ಫುಟ್ಪಾತ್ ಪಾರ್ಕಿಂ ಗ್ 4 ಪ್ರಕರಣ- 4 ಸಾವಿರ ರೂ., ಕರ್ಕಶ ಹಾರ್ನ್ 13 ಪ್ರಕರಣ-6500 ರೂ. ದಂಡ ಹಾಕಲಾ ಗಿದೆ. ಇತರೆ 33 ಪ್ರಕರಣಗಳನ್ನು ದಾಖಲಿಸಿ 19 ಸಾವಿರ ದಂಡ ವಸೂಲಿ ಮಾಡಲಾಗಿದೆ.