ಬೆಂಗಳೂರು:- ಕೊವಿಡ್ ಹಗರಣದ ತನಿಖೆಗೆ SIT ರಚನೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಅಸ್ತು ಎಂದಿದೆ.
ಸಿಎಂಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಹಗರಣದ ಬಗ್ಗೆ ಚರ್ಚೆ ನಡೆದಿದ್ದು, ತನಿಖೆಗಾಗಿ SIT ತಂಡ ರಚಿಸಲು ಸಂಪುಟ ಅಸ್ತು ಅಂದಿದೆ.
ಕೊವಿಡ್ ಹಗರಣದ ಸಂಬಂಧ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಎಸ್ಐಟಿ ಗೆ ವಹಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಕೊವಿಡ್ ವೇಳೆ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಕೊವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗುವುದು. ವರದಿ ಆಧರಿಸಿ ಎಸ್ಐಟಿ ತನಿಖೆ ಆಗಲಿದೆ . ಅಗತ್ಯ ಬಿದ್ದರೆ FIR ದಾಖಲಾಗುತ್ತೆ, ಚಾರ್ಜ್ಶೀಟ್ ಕೂಡ ಹಾಕ್ತೇವೆ. ಯಾರ ವಿರುದ್ಧ FIR ದಾಖಲಿಸಬೇಕೆಂದು SIT ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಬಿಎಸ್ವೈ, ರಾಮುಲು ಕಾರ್ಯವೈಖರಿಗೆ ಸಮಿತಿ ಅಕ್ಷೇಪ ವ್ಯಕ್ತಪಡಿಸಿದೆ. ಖಾಸಗಿ ಲ್ಯಾಬ್ಗಳಿಗೆ 6.93ಕೋಟಿ ಹಣ ಸಂದಾಯವಾಗಿದೆ. ಆದ್ರೆ 14 ಲ್ಯಾಬ್ಗಳು ICMRನಿಂದ ಮಾನ್ಯತೆ ಪಡೆದಿಲ್ಲ. ಈ ICMR ಲ್ಯಾಬ್ಗಳು ಅಧಿಕೃತ ಅಲ್ಲ ಎಂದು ಜಾನ್ ಮೈಕೆಲ್ ಡಿ ಕುನ್ಹಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
RTPCR ಟೆಸ್ಟ್ಗೆ ಲ್ಯಾಬ್ಗಳ ಸಾಮರ್ಥ್ಯ, ಕ್ಷಮತೆ ಗುರುತಿಸಿಲ್ಲ. ಸಾಮರ್ಥ್ಯ, ಕ್ಷಮತೆ ಪರಿಶೀಲಿಸದೆ ಲ್ಯಾಬ್ಗಳಿಗೆ ಅನುಮತಿ ನೀಡಲಾಗಿದೆ. 6 ಖಾಸಗಿ ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಲಾಗಿದೆ. ಅನಧಿಕೃತವಾಗಿ ಲ್ಯಾಬ್ಗಳಿಗೆ ಹಣ ಸಂದಾಯದ ಬಗ್ಗೆ ಮಧ್ಯಂತರ ವರದಿ ನೀಡಲಾಗಿದೆ