ಬೆಂಗಳೂರು: ಸರ್ಕಾರ ನಡೆಸಬೇಕಾಗಿರುವುದು ಸಂವಿಧಾನದ ಮೇಲೆ ಹೊರತು ಷರಿಯಾ ಕಾನೂನಿನ ಮೇಲೆ ಅಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳಿಗೆ ಅಪಮಾನ ಮಾಡಿ ಮುಸ್ಲಮರಿಗಷ್ಟೇ ಜಮೀನು ಕೊಡಲು ಹೊರಟಿದ್ದೀರಾ? ಪಹಣಿಯಲ್ಲಿ ಯಾಕೆ ವಕ್ಪ್ ಬೋರ್ಡ್ ಕರ್ನಾಟಕ ಸರ್ಕಾರ ಅಂತ ಹಾಕುತ್ತಿದ್ದೀರಿ?
ತಹಸೀಲ್ದಾರ್ಗಳು, ಜಿಲ್ಲಾಧಿಕಾರಿಗಳು ಸರ್ಕಾರ ನಡೆಸಬೇಕಾಗಿರುವುದು ಸಂವಿಧಾನದ ಮೇಲೆ ಹೊರತು ಷರಿಯಾ ಕಾನೂನಿನ ಮೇಲೆ ಅಲ್ಲ.
ಜಮೀರ್ ಅಹಮದ್ ಹೇಳಿದರು, ಮಸೀದಿಯ ಮುಲ್ಲಾ ಹೇಳಿದರು ಅಂತ ಕೆಲಸ ಮಾಡುವುದು ಅಲ್ಲ. ಇದು ಮುಂದುವರಿದರೆ ಹೈಕೋರ್ಟ್ ಮತ್ತು ಲೋಕಾಯುಕ್ತಕ್ಕೆ ಹೋಗಿ ನಿಮ್ಮನ್ನು ಅಮನಾತು ಮಾಡಲು ಆದೇಶ ತರುವಲ್ಲಿ ನಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಬಹಳಷ್ಟು ಜನರಿಗೆ ಕೇಂದ್ರ ಸರ್ಕಾರ ಯಾಕೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಅಂತ ಗೊತ್ತಿಲ್ಲ. ಸಚಿವ ಜಮೀರ್ ಅಹಮದ್ ಕೆಲವು ದಿನಗಳ ಹಿಂದೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ,ವಕ್ಫ್ ಬೋರ್ಡ್ ಯಾವ ಆಸ್ತಿಗಳು ತನ್ನದು ಅಂತ ಹೇಳುತ್ತದೆ ಅದನ್ನು 15 ದಿನಗಳಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಬಂದಿದ್ದಾರೆ. ಸಚಿವರು ಹೇಳಿದರು ಅಂತ ಜಿಲ್ಲಾಧಿಕಾರಿಗಳಯ ರಾತ್ರೋ ರಾತ್ರಿ ಪಹಣಿಯಲ್ಲಿ ಹೆಸರು ಬದಲಿಸಲು ಹೊರಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆಯನ್ನು ವಕ್ಫ್ ಬೋರ್ಡ್ ತನ್ನದು ಅಂತ ಹೇಳುತ್ತಿದೆ ಎಂದು ತಿಳಿಸಿದರು.