ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯನ್ನು (Bengaluru-Mysuru Expressway) ಬಳಸುವ ಕಾರುಗಳಿಗೆ ಟೋಲ್ ದರ ಹೆಚ್ಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಟ್ರಕ್, ಬಸ್ಗಳ ಒಂದೇ ಪ್ರಯಾಣಕ್ಕೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಂಗಳೂರೂ-ಮೈಸೂರು ಹೆದ್ದಾರಿಯನ್ನು ಬಳಸುವ ಕಾರುಗಳಿಗೆ ಟೋಲ್ ದರದಲ್ಲಿ 10 ರೂ. ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಇದು ಅನ್ವಯವಾಗಲಿದೆ.
ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸಲಾದ ಟೋಲ್ ಶುಲ್ಕ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾ
1.ನಾಲ್ಕು ಚಕ್ರವಾಹನ
ಏಕಮುಖ ಪ್ರಯಾಣ – 170 ರೂ.
ದ್ವಿಮುಖ ಪ್ರಯಾಣ – 255 ರೂ.
ತಿಂಗಳ ಪಾಸ್ – 5,715
ಲೋಕಲ್ ತಿಂಗಳ ಪಾಸ್ – 340
2.ಎಲ್ಸಿವಿ, ಎಲ್ಜಿವಿ/ಮಿನಿಬಸ್
ಏಕಮುಖ ಪ್ರಯಾಣ – 275 ರೂ.
ದ್ವಿಮುಖ ಪ್ರಯಾಣ – 415 ರೂ.
ತಿಂಗಳ ಪಾಸ್ – 9,230 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
3.ಟ್ರಕ್, ಬಸ್ 2 ಎಕ್ಸೆಲ್
ಏಕಮುಖ ಪ್ರಯಾಣ – 580 ರೂ.
ದ್ವಿಮುಖ ಪ್ರಯಾಣ – 870 ರೂ.
ತಿಂಗಳ ಪಾಸ್ – 19,345 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
4. 3 ಎಕ್ಸೆಲ್ ವೆಹಿಕಲ್
ಏಕಮುಖ ಪ್ರಯಾಣ – 635 ರೂ.
ದ್ವಿಮುಖ ಪ್ರಯಾಣ – 950 ರೂ.
ತಿಂಗಳ ಪಾಸ್ – 21,100 ರೂ.