ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ ಆದ್ದರಿಂದ ಬೆಂಗಳೂರು ಖಾಕಿ ಅಲರ್ಟ್ ಆಗಿದ್ದಾರೆ. ಚುನಾವಣೆ ಟೈಮ್ ಯಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಶಾಂತಿ ಕದಡುವ, ಅಕ್ರಮ ಕೆಲಸಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಸಭೆ ನಡೆಸಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಡಬೇಕು, ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ಅಧಿಕಾರಿ ಸೂಚನೆ ನೀಡಿದ್ದಾರೆ. ಎಲೆಕ್ಷನ್ ಸಮಯದಲ್ಲಿ ಹೆಚ್ಚು ರೌಡಿಗಳ ಮೇಲೆ ನಿಗಾ ವಹಿಸಬೇಕು. ಅರೆಸ್ಟ್ ಆಗದೇ ಇದ್ದವರು, ವಾರಂಟ್ ಇದ್ದವರು ಚುನಾವಣೆ ಸಮಯದಲ್ಲಿ ಬರುವ ಸಾಧ್ಯತೆ ಇರತ್ತೆ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು.
ಯಾವುದೇ ರಾಜಕೀಯ ಪಕ್ಷಕ್ಕೆ ಅನುಕೂಲ ಆಗುವ ರೀತಿ ಕೆಲಸ ಮಾಡಬಾರದು. ಕಾನೂನು ಅಡಿಯಲ್ಲಿ ಕೆಲಸ ಮಾಡಬೇಕು. ಜೊತೆಗೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಮುಂದಿನ ದಿನದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಬೇಕು. ಚುನಾವಣಾ ಆಯೋಗದ ಕಡೆಯಿಂದ ಫ್ಲೈಯಿಂಗ್ ಸ್ವಾಡ್ ಬರತ್ತೆ. ಅಧಿಕಾರಿಗಳು ಮುಕ್ತ ಕೆಲಸ ಮಾಡಲು ಸಹಕಾರ ನೀಡಬೇಕು. ಮದ್ಯ ಹಂಚಿಕೆ ಕಂಡರೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿ ಸೂಚನೆ ನೀಡಿದ್ದಾರೆ.