ಬೆಂಗಳೂರು:- ರಾಜ್ಯದಲ್ಲಿ 3,456 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, 52 ಮಂದಿಗೆ ಸೋಂಕು ದೃಢಪಟ್ಟಿದೆ.
ಇಂದು ಯಾವುದೇ ಸಾವು ನೋವು ವರದಿಯಾಗಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ 341 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಇಂದು ಕೋವಿಡ್ನಿಂದ ಗುಣಮುಖರಾಗಿ 60 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ದರ ಶೇ. 1.50 ಇದೆ.
ಬೆಂಗಳೂರಿನಲ್ಲಿ ಇಂದು 12 ಪಾಸಿಟಿವ್ ಕೇಸ್ಗಳು ವರದಿಯಾಗಿದೆ. ಮೈಸೂರಿನಲ್ಲಿ 5, ಮಂಡ್ಯದಲ್ಲಿ 7, ತುಮಕೂರಿನಲ್ಲಿ 3, ದಕ್ಷಿಣ ಕನ್ನಡದಲ್ಲಿ 1 ಪ್ರಕರಣಗಳು ದಾಖಲಾಗಿದೆ. ಅದೇ ರೀತಿ ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಉಡುಪಿ, ವಿಜಯಪುರ, ಯಾದಗಿರಿ, ರಾಮನಗರ, ಕೊಪ್ಪಳ, ಚಾಮರಾಜನಗರ, ಬೀದರ್, ಬಳ್ಳಾರಿಯಲ್ಲಿ ಇಂದು ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ.