ಬೆಂಗಳೂರು: ನಗರದಲ್ಲಿ ನಿಯಂತ್ರಿಸಲು ಬೆಂಗಳೂರು ಹೊರವಲಯದ ಸುತ್ತಲೂ ಸುಮಾರು 287 ಕಿಮೀ ಉದ್ದದ ರಿಂಗ್ ರೈಲು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಅಧ್ಯಯನಕ್ಕಾಗಿ ಈಗಾಗಲೆ 7 ಕೋಟಿ ರೂ. ಮಂಜಾರಾಗಿತ್ತು. ಇದೀಗ ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಅಂತಿಮ ಹಂತದ ಲೊಕೇಶನ್ ಸರ್ವೆ ಕಾರ್ಯ ನಡೆಯುತ್ತಿದೆ.
ಈ ಲೊಕೆಶನ್ ಸರ್ವೆಯಲ್ಲಿ ರೈಲ್ವೆ ಇಲಾಖೆ ಹಲವು ಮಾಹಿತಿ ಸಂಗ್ರಹಿಸಿದೆ. ಅಲೈನ್ ಮೆಂಟ್, ನಿಲ್ದಾಣಗಳ ಸಂಖ್ಯೆ ಮತ್ತು ಮ್ಯಾಪಿಂಗ್, ಸಿವಿಲ್ ಸ್ಟ್ರಕ್ಚರ್-ಬ್ರಿಡ್ಜ್ ಗಳು ಯೋಜನೆಗೆ ಬೇಕಾಗುವ ಲ್ಯಾಂಡ್ ಬಗ್ಗೆ ಮಾಹಿತಿ ಸಂಗ್ರಹಿಸಿದೆ.