ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಲೋಕ ಸಮರಕ್ಕೆ ಸಜ್ಜಾಗಿದೆ. ಈಗ ಇದಕ್ಕಿಂತ ಮುಂಚಿತವಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆ. 16ರಂದು ಉಪ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಇಂದು ಜಂಟಿ ಸಭೆ ನಡೆಸಲಾಯಿತು.
ಹಾಗೆ ನಗರದ ಮಲ್ಲೇಶ್ವರಂನ ಬಾಬು ದೇಶಪಾಂಡೆ ಭವನದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಶಾಸಕರುಗಳ ಸಭೆಯಲ್ಲಿ ಬಿಜೆಪಿ ಮಾಜಿ ಸಚಿವರು , ಶಾಸಕರು , ಜೆಡಿಎಸ್ ಶಾಸಕರು ಉಪಸ್ಥಿತರಿದ್ದರು.
ಅಲ್ಲದೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಸೇರಿದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಶ್ರೀ ಎ.ಪಿ. ರಂಗನಾಥ್ ಭಾಗಿಯಾಗಿದ್ದು
ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್,ಮಾಜಿ ಸಚಿವರಾದ ಶ್ರೀ ಮುನಿರತ್ನ, ಮಾಜಿ ಡಿಸಿಎಂ ಶ್ರೀ ಅಶ್ವಥ್ ನಾರಾಯಣ್, MLC ಶ್ರೀ ಟಿ. ಎ.ಶರವಣ, ಶ್ರೀ ತಿಪ್ಪೇಸ್ವಾಮಿ, MLA ಶ್ರೀ ಉದಯ್ ಗರುಡಾಚಾರ್,MLA ಶ್ರೀ ರಾಮ್ ಮೂರ್ತಿ , mla ರವಿ ಸುಬ್ರಮಣ್ಯ ಇತರ ಗಣ್ಯರು ಉಪಸ್ಥಿತರಿದ್ದರು.