ಬೆಂಗಳೂರು ;- ವಿವಿಗೆ ನ್ಯಾಕ್ ಎ ಡಬಲ್ ಪ್ಲಸ್ ಬಂದಿದ್ದರೂ ವಿದ್ಯಾರ್ಥಿಗಳಿಗೆ ಕೊಡಬೇಕಿದ್ದ ಮೂಲ ಸೌಕರ್ಯ ಕೊಡದೇ ವಿವಿ ಸತಾಯಿಸುತ್ತಿದೆ ಅಂತ ವಿದ್ಯಾರ್ಥಿಗಳು ಆರೋಪಿಸಿದ್ದು, ವಿಶ್ವವಿದ್ಯಾಲಯದ ಸುಮಾರು 52 ವಿಭಾಗದ 3 ಸಾವಿರ ವಿದ್ಯಾರ್ಥಿಗಳು ಇಂದು ಸ್ವಯಂ ಪ್ರೇರಿತರಾಗಿ ತರಗತಿಗೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ.
ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಸುಸ್ತಾಗಿದೆ ಎಂದು ವಿವಿ ವಿರುದ್ಧ ವಿದ್ಯಾರ್ಥಿಗಳ ಕಿಡಿ ಕಾರಿದ್ದಾರೆ. ಕೊಡಬೇಕಿರುವ ಮೂಲ ಸೌಕರ್ಯಗಳನ್ನ ಕೊಡದೇ ಬೆಂಗಳೂರು ವಿಶ್ವವಿದ್ಯಾಲಯದ ಸತಾತಿಯಿಸುತ್ತಿದೆ. ಯಾವುದೇ ಕಾರಣಕ್ಕೂ ಇವತ್ತು ತರಗತಿಗೆ ಹಾಜರಾಗುವುದಿಲ್ಲ, ವಿವಿ ವಿರುದ್ಧ ಪ್ರತಿಭಟನೆ ಮಾಡ್ತೀವಿ ಅಂತ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿಯೂ ಇಂದು ವಿದ್ಯಾರ್ಥಿಗಳು ಹಾಜರಾಗಲ್ಲ. ವಿಶ್ವವಿದ್ಯಾಲಯದ ವಿರುದ್ಧ ಸುಮಾರು 3 ಸಾವಿರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ.