ಸೆಪ್ಟೆಂಬರ್ 7ರಂದು ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಬೆಸ್ಕಾಂ ಕೆಲ ಸುರಕ್ಷಿತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾರ್ವಜನಿಕರು ಗಣೇಶೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ವಿದ್ಯುತ್ ಅವಘಡಗಳು ಸಂಭವಿಸದಂತೆ ಸುರಕ್ಷತೆಗೆ ಆದ್ಯತೆವಂತೆ ಬೆಸ್ಕಾಂ ತಿಳಿಸಿದೆ. ಜೊತೆಗೆ 1912 ಸಹಾಯವಾಣಿ ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಸಾರ್ವಜನಿಕರು ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರವಹಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕೆಲ ಮಾರ್ಗ ಸೂಚನೆಗಳನ್ನು ಬಿಡುಗಡೆ ಮಾಡಿದೆ.
- ಹಬ್ಬಕ್ಕೆ ತೋರಣ, ಪೆಂಡಾಲ್, ಸೀರಿಯಲ್ ಲೈಟ್ ಹಾಕುವಾಗ ವಿದ್ಯುತ್ ತಂತಿಗಳ ಬಗ್ಗೆ ಎಚ್ಚರವಹಿಸಬೇಕು.
- ಸೀರಿಯಲ್ ಲೈಟ್ ತಂತಿ ಸಮರ್ಪಕ ಇನ್ಸುಲೇಟ್ ಆಗಿರಬೇಕು. ವಿದ್ಯುತ್ ಕಂಬದಿಂದ ಸಂಪರ್ಕ ಪಡೆಯಬಾರದು.
- ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟಬಾರ್ದು.
- ಮೆರವಣಿಗೆ ವೇಳೆ ರಸ್ತೆ ಬದಿ ವಿದ್ಯುತ್ ತಂತಿಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸಬೇಡಿ. ಮೆರವಣಿಗೆ ಮಾರ್ಗವನ್ನ ಮುಂಚಿತ ಎಸಿ ಗಮನಕ್ಕೆ ತನ್ನಿ.
- ತುಂಡಾದ ವೈರ್, ವಿದ್ಯುತ್ ಕಿಡಿ ಗಮನಕ್ಕೆ ಬಂದರೆ, ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ. ವಿದ್ಯುತ್ ಪರಿಕರಗಳಿರುವ ಸ್ಥಳಗಳಲ್ಲಿ ‘ಡೇಂಜರ್ ಜೋನ್’ ಎಂದು ಸೂಚಿಸಬೇಕು ಎಂದು ತಿಳಿಸಿದೆ.