ಬೆಂಗಳೂರು: ವಿದ್ಯುತ್ ಅವಘಡಗಳು ಸರ್ವೆ ಸಾಮಾನ್ಯವಾಗಿರುವ ಇವತ್ತಿನ ಸಂದರ್ಭದಲ್ಲಿ ಅವುಗಳಿಂದ ಹೇಗೆ ದೂರವಿರ ಬೇಕು.ವಿದ್ಯುತ್ ಅವಘಡಗಳಾಗದಂತೆ ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು.ಅವಘಡಗಳು ಸಂಭವಿಸಿದಾಗ ಮುನ್ನೆಚ್ಚರಿಕಾ ಕ್ರಮಗಳಾಗಿ ವಹಿಸಬೇಕಾದ ಜಾಗೃತಿ ಬಗ್ಗೆ ಮಾಹಿತಿ ನೀಡುವ ಅಭಿಯಾನ ಬೆಸ್ಕಾಂ ವತಿಯಿಂದ ಶುರುವಾಗಿದೆ.
ಶಾಲೆಗಳ ಮಕ್ಕಳಲ್ಲಿ ವಿದ್ಯುತ್ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಶುರುವಾಗಿರುವ ಅಭಿಯಾನದ ಭಾಗವಾಗಿ ಇಂದು ಮತ್ತಿಕೆರೆಯ ಬಿಬಿಎಂಪಿ ಕಾಲೇಜಿನಲ್ಲಿ ವಿದ್ಯುತ್ ಅವಘಡಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ-ಪ್ರಶ್ನಾವಳಿ ನಡೆಯಿತು.ಮತ್ತಿಕೆರೆ ವಿಭಾಗದ ಬೆಸ್ಕಾಂ ಅಧಿಕಾರಿಗಳಾದ ಪುಟ್ಟಸ್ವಾಮಿ ವಿದ್ಯುತ್ ಅವಘಡಗಳ ಬಗ್ಗೆ ಮಾಹಿತಿ ನೀಡಿದರಲ್ಲದೇ ವಿದ್ಯಾರ್ಥಿಗಳು ಈ ಬಗ್ಗೆ ಸ್ವಯಂಜಾಗೃತಿ ತೆಗೆದುಕೊಳ್ಳುವುದರ ಜತೆಗೆ ಸಾರ್ವಜನಿಕವಾಗಿಯೂ ಹೇಗೆ ಜಾಗೃತಿ ಮೂಡಿಸಬೇಕೆನ್ನುವುದರ ಬಗ್ಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಆನಂದ್ ಮಕ್ಕಳು ವಿದ್ಯುತ್ ಅವಘಡಗಳ ಬಗ್ಗೆ ಜಾಗೃತಿ ವಹಿಸುವುದರ ಮೂಲಕ ಮುಂದಿನ ಪೀಳಿಗೆಯ ಜಗತ್ತನ್ನು ಹೇಗೆ ವಿದ್ಯುತ್ ಅವಘಡಮುಕ್ತಗೊಳಿಸಬೇಕೆನ್ನುವುದರ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿಗಳು ವಿದ್ಯುತ್ ಅವಘಡಗಳ ಬಗ್ಗೆ ತಮಗಿದ್ದ ಪ್ರಶ್ನೆ-ಅನುಮಾನಗಳಿಗೆ ಉತ್ತರ ಮತ್ತು ಪರಿಹಾರ ಕಂಡುಕೊಂಡರು.