ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ ಎಂದು ಕೆಲ ವರ್ಷಗಳಿಂದ ಆಗಾಗ ಸುದ್ದಿಯಾಗುತ್ತಿರುತ್ತದೆ ಮತ್ತು ಅದು ಅಷ್ಟೇ ವೇಗದಲ್ಲಿ ಮೂಲೆ ಗುಂಪಾಗುತ್ತದೆ. ಆದರೆ ಈ ವರದಿ ಮಾತ್ರ ನಿರ್ಲಕ್ಷ್ಯ ಮಾಡುವಂತಹದ್ದಲ್ಲ. ಹೌದು, ಭಾರತದಲ್ಲಿ ಮಾರಾಟವಾಗುವ ಎಲ್ಲಾ ಬಗೆಯ ಉಪ್ಪು ಮತ್ತು ಸಕ್ಕರೆಗಳಲ್ಲಿ ಪ್ಲಾಸ್ಟಿಕ್ ಕಣಗಳಿರುತ್ತವೆ ಎಂಬ ಆಘಾತಕಾರಿ ಅಂಶ ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.
ಟಾಕ್ಸಿಕ್ ಲಿಂಕ್ ಎಂಬ ಪರಿಸರ ಸಂಶೋಧನಾ ಸಂಸ್ಥೆಯ ಅಧ್ಯಯನದಿಂದ ಈ ವಿಚಾರ ಬಹಿರಂಗವಾಗಿದೆ.
ಭಾರತದಲ್ಲಿ ಮಾರಾಟವಾಗುವ ಎಲ್ಲಾ ಬ್ರಾಂಡ್ಗಳ, ಎಲ್ಲಾ ಬಗೆಯ ಉಪ್ಪು ಹಾಗೂ ಸಕ್ಕರೆಯಲ್ಲಿ ಪ್ಲಾಸ್ಟಿಕ್ ಕಣಗಳಿರುತ್ತವೆ (ಮೈಕ್ರೊಪ್ಲಾಸ್ಟಿಕ್) ಎಂದು ಟಾಕ್ಸಿಕ್ಸ್ ಲಿಂಕ್ ಎಂಬ ಪರಿಸರ ಸಂಶೋಧನಾ ಸಂಸ್ಥೆಯ ಅಧ್ಯಯನದಿಂದ ಬಹಿರಂಗವಾಗಿದೆ. ಹೊಸ ಅಧ್ಯಯನದ ಪ್ರಕಾರ, ಭಾರತದಲ್ಲಿರುವ ಎಲ್ಲಾ ಮಾದರಿಯ ಉಪ್ಪು ಹಾಗೂ ಸಕ್ಕರೆಯ ಬ್ರ್ಯಾಂಡ್ಗಳಲ್ಲಿ, ಈ ಬ್ರ್ಯಾಂಡ್ಗಳು ಎಷ್ಟೇ ದೊಡ್ಡದಾಗಿರಲಿ, ಅಥವಾ ಚಿಕ್ಕದೇ ಆಗಿರಲಿ, ಪ್ಯಾಕ್ ಮಾಡಿರಲಿ ಅಥವಾ ಪ್ಯಾಕ್ ಮಾಡದೇ ಇರಲಿ.. ಅವುಗಳಲ್ಲಿ ಮೈಕ್ರೋಪ್ಲಾಸ್ಟಿಕ್ಸ್ಗಳ ಅಂಶ ಕಂಡು ಬಂದಿದೆ ಎಂದು ತಿಳಿಸಿದೆ ‘ಉಪ್ಪು ಮತ್ತು ಸಕ್ಕರೆಯಲ್ಲಿ ಪ್ಲಾಸ್ಟಿಕ್ ಕಣಗಳು’ ಎಂಬ ಶೀರ್ಷಿಕೆಯಲ್ಲಿ ಈ ಸಂಸ್ಥೆ ವ್ಯಾಪಕ ಅಧ್ಯಯನ ನಡೆಸಿದೆ.
ಟೇಬಲ್ ಸಾಲ್ಟ್, ಕಲ್ಲುಪ್ಪು, ಕಚ್ಚಾ ಉಪ್ಪು ಮಾದರಿಗಳನ್ನು ತೆಗೆದುಕೊಂಡು ಅಧ್ಯಯನ ನಡೆಸಲಾಗಿದೆ. ಸ್ಥಳೀಯ ಮತ್ತು ಆನ್ಲೈನ್ ಮಾರುಕಟ್ಟೆಯಲ್ಲಿ ಖರೀದಿಸಿದ 5 ಬಗೆಯ ಸಕ್ಕರೆಯನ್ನು ಕೂಡ ಪರೀಕ್ಷೆಗೊಳಪಡಿಸಲಾಯಿತು. ಎಲ್ಲದರಲ್ಲೂ ಫೈಬರ್, ಹರಳು ಮತ್ತು ಚೂರುಗಳ ರೂಪದಲ್ಲಿ ಪ್ಲಾಸ್ಟಿಕ್ ಕಣಗಳಿದ್ದವು. ಇವುಗಳ ಗಾತ್ರ. 1 ಮಿಮೀ ನಿಂದ 5 ಮಿಮೀ ವರೆಗೆ ಇತ್ತು. ಆಯೋಡಿನ್ಯುಕ್ತ ಉಪ್ಪಿನಲ್ಲಿ ತೆಳುನಾರು ಮತ್ತು ಪೊರೆ ರೂಪದಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಕಂಡು ಬಂದಿದೆ
ಬಹು-ಬಣ್ಣದ ತೆಳುವಾದ ಫೈಬರ್ ಮತ್ತು ಫಿಲ್ಮ್ಗಳ ರೂಪದಲ್ಲಿ ಅಯೋಡಿಕರಿಸಿದ ಉಪ್ಪಿನಲ್ಲಿ ಅತ್ಯಧಿಕ ಮಟ್ಟದ ಮೈಕ್ರೋಪ್ಲಾಸ್ಟಿಕ್ಗಳು ಕಂಡುಬಂದಿವೆ. ಟಾಕ್ಸಿಕ್ಸ್ ಲಿಂಕ್ ಸಂಸ್ಥಾಪಕ-ನಿರ್ದೇಶಕ ರವಿ ಅಗರ್ವಾಲ್ ಈ ಬಗ್ಗೆ ಮಾತನಾಡಿದ್ದು, “ನಮ್ಮ ಅಧ್ಯಯನದ ಉದ್ದೇಶವು ಮೈಕ್ರೋಪ್ಲಾಸ್ಟಿಕ್ಗಳ ಕುರಿತು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಡೇಟಾಬೇಸ್ಗೆ ಕೊಡುಗೆ ನೀಡುವುದಾಗಿದೆ, ಇದರಿಂದಾಗಿ ಜಾಗತಿಕ ಪ್ಲಾಸ್ಟಿಕ್ ಒಪ್ಪಂದವು ಈ ಸಮಸ್ಯೆಯನ್ನು ಕೇಂದ್ರೀಕೃತ ರೀತಿಯಲ್ಲಿ ಪರಿಹರಿಸುತ್ತದೆ’ ಎಂದು ತಿಳಿಸಿದ್ದಾರೆ.
ಟಾಕ್ಸಿಕ್ಸ್ ಲಿಂಕ್ ಅಸೋಸಿಯೇಟ್ ನಿರ್ದೇಶಕ ಸತೀಶ್ ಸಿನ್ಹಾ ಮಾತನಾಡಿ “ನಮ್ಮ ಅಧ್ಯಯನವು ಎಲ್ಲಾ ಉಪ್ಪು ಮತ್ತು ಸಕ್ಕರೆ ಮಾದರಿಗಳಲ್ಲಿಗಣನೀಯ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕಣಗಳು ಇರುವುದನ್ನು ಪತ್ತೆ ಮಾಡಿದೆ. ಇದು ಮನುಷ್ಯರ ಆರೋಗ್ಯದ ಮೇಲೆ ಉಂಟು ಮಾಡುವ ದೀರ್ಘಕಾಲೀನ ಪರಿಣಾಮಗಳ ಕುರಿತು ತಕ್ಷಣ