ಬೆಂಗಳೂರು: ಮಾರ್ಚ್ 9: ಇಂದು ಚಾಮರಾಜಪೇಟೆಯ ಗಾಯನ ಸಮಾಜದಲ್ಲಿ ವಿದುಷಿ ಶ್ರೀಮತಿ ನಿವೇದಿತಾ ಶರ್ಮ ಅವರ ಶಿಷ್ಯೆ ಹಾಗೂ ಶ್ರೀಮತಿ ಸರಸವಾಣಿ ಎಂ ಎಸ್ ಮತ್ತು ದಿ. ಪ್ರಕಾಶ್ ಅವರ ಪುತ್ರಿ ಕುಮಾರಿ ಸೌರಭ ನಾಡಿಗ್ ರಂಗಪ್ರವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ನೃತ್ಯ ಕಾಲವಿದರು ಮತ್ತು scholar DR ವಿದ್ಯಾ ರಾವ್ , ಪ್ರೊಫೆಸರ್ MR ಹನುಮಂತರಾಯ ಮತ್ತು ವಿದುಷಿ ಶ್ರೀಮತಿ ನಾಗಶ್ರೀ ಕೆ ಎಸ್ ಕಾರ್ಯಕ್ರಮಕ್ಕೆ ಆಗಮಿಸಿ ಕುಮಾರಿ ಸೌರಭ ಅವರ ಮುಂದಿನ ಜೀವನಕ್ಕೆ ಹಾರೈಸಿ ಆಶೀರ್ವದಿಸಿದರು.
ಸೌರಭ ರವರು ಶ್ರೀಮತಿ ಸರಸವಾಣಿ ಎಂ ಎಸ್ ಮತ್ತು ಲೇ ಪ್ರಕಾಶ್ ಎನ್ ವಿ ರವರ ಪುತ್ರಿಯಾಗಿದ್ದು, ಪತ್ರಕರ್ತ ಪವನ್ ನಾಡಿಗ್ ರವರ ಸಹೋದರಿಯಾಗಿದ್ದಾರೆ. ಸುಮಾರು 13 ವರ್ಷಗಳ ಹಿಂದೆ, ವಿದುಷಿ ಶ್ರೀಮತಿ. ನಿವೇದಿತಾ ಶರ್ಮಾ ನಾಡಿಗ್ ರವರ ಬಳಿ ಪುಟ್ಟ ವಿದ್ಯಾರ್ಥಿನಿಯಾಗಿ ಭರತನಾಟ್ಯವನ್ನು ಕಲಿಯಲು ಆರಂಬಿಸಿದ ಕುಮಾರಿ ಸೌರಭ, ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯಂತೆ ಭರತನಾಟ್ಯವನ್ನು ಕಲಿಯಲು ಆರಂಭಿಸಿ ಕೆಲವೇ ದಿನಗಳಲ್ಲಿ ನೃತ್ಯ, ಪ್ರತಿ ದಿನದ ಅವಿಭಾಜ್ಯ ಅಂಗವಾಗಿ ರೂಢಿಸಿಕೊಂಡರು. ಶಾಲಾ ದಿನದಲ್ಲೇ ಭರತನಾಟ್ಯದ ಕಡೆಗೆ ಹೆಚ್ಚಿನ ಆಸಕ್ತಿ ಇದ್ದ ಕಾರಣ, 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುವ ಮೊದಲೇ, ಭರತನಾಟ್ಯದ ಜೂನಿಯರ್ ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣರಾಗಿದ್ದಾರೆ.
ಭರತನಾಟ್ಯದ ಬಗ್ಗೆ ಆಕೆಯ ಶ್ರದ್ಧೆ ಮತ್ತು ಆಸಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಅವರು ಪ್ರಸ್ತುತ, ವಿದ್ವತ್ ಅಭ್ಯಾಸ ಮಾಡುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಲಿದ್ದಾರೆ. ಈ 13 ವರ್ಷದ ನೃತ್ಯ ಕಲಿಕೆಯಲ್ಲಿ ಕುಮಾರಿ ಸೌರಭ ರಾಜ್ಯದ ಹಾಗೂ ಅಂತರ್ ರಾಜ್ಯ ಪ್ರಸಿದ್ಧ ವೇದಿಕೆಗಳಲ್ಲಿ ತಮ್ಮ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.
ಅದರಲ್ಲಿ ಮುಖ್ಯವಾದುದು ಎಂದರೆ, 2011 ರಲ್ಲಿ ಗಾಂಧಿಜಯಂತಿ ಪ್ರಯುಕ್ತ ಗೌರವಾನ್ವಿತ, ರಾಜ್ಯಪಾಲರ ಸಮ್ಮುಖದಲ್ಲಿ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ತಮ್ಮ ನೃತ್ಯ ಪ್ರದರ್ಶನವನ್ನು ನೀಡಿದ್ದು.2015 ರಲ್ಲಿ ಬೆಂಗಳೂರಿನ ಚನ್ಸೆರಾ ಪೆವಿಲಿಯನ್ , ಅಲ್ಲಿ ನಡೆದ ಕಾರ್ಪೊರೇಟ್ ಕಾರ್ಯಕ್ರಮದಲ್ಲಿ ತಮ್ಮ ನೃತ್ಯ ಪ್ರದರ್ಶನ, 2020ರಲ್ಲಿ ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದ ಕೂಠಾರೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.
2022 ರಲ್ಲಿ ಮಂತ್ರಾಲಯದಲ್ಲಿ ನಡೆದ ಶ್ರೀ ರಾಘವೇಂದ್ರ ವೈಭವೋತ್ಸವ ಮತ್ತು ಕಲಾ ಶ್ರೀ ಉತ್ಸವದಲ್ಲಿ, ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ, ಇದರ ಜೊತೆಗೆ ಇನ್ನೂ ಬಹಳಷ್ಟು ಪ್ರಸಿದ್ಧ ವೇದಿಕೆಗಳಲ್ಲಿ ತಮ್ಮ ನೃತ್ಯ ಪ್ರದರ್ಶನವನ್ನು ನೀಡಿ ಜನಮನ್ನಣೆ ಗಳಿಸಿದ್ದಾರೆ..