ಕುಂದಗೋಳ: ಪಟ್ಟಣದ ಶಂಬೋಲಿಂಗೇಶ್ವರ ದೇವಸ್ಥಾನದಲ್ಲಿ ಭಾರತಿ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಜಯ ಸಂಕಲ್ಪ ಕಂಕಣ ಹಾಗೂ ಸಂಕಲ್ಪ ಪ್ರಮಾಣ ಪತ್ರವನ್ನು ಕುಂದಗೋಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಪ್ರಭಾರಿ ಷಣ್ಮುಖ ಗುರಿಕಾರ ಗುರುವಾರ ಭೋದನೆ ಮಾಡಿದರು.
ಪಕ್ಷದ ಟಿಕೆಟಿಗಾಗಿ ಟಿಕೇಟಿನ ಆಕಾಕ್ಷಿಗಳಾದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಎಮ್ ಆರ್ ಪಾಟೀಲ ಪರಸ್ಪರವಾಗಿ ಕಾರ್ಯಕರ್ತರ ಎದುರೆ ಕಂಕಣ ಕಟ್ಟಿಸಿ ಇಬ್ಬರು ಮುಖಂಡರಿಂದ ದೇವರ ಮುಂದೆ ಸಂಕಲ್ಪ ಮಾಡಿ ಪಕ್ಷದ ಏಳ್ಗೆಗೆ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇವೆ ಎಂಬ ಸಂಕಲ್ಪವನ್ನು ಷಣ್ಮುಖ ಗುರಿಕಾರರವರು ಭೋದಿಸಿದರು.
ನಂತರ ಪಪಂ ಸದಸ್ಯ ವಾಗೇಶ ಗಂಗಾಯಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಾಷಣ ವೀಕ್ಷಣೆ ಮಾಡಿದರು. ನಂತರ ಭೂತ ಅಧ್ಯಕ್ಷರ ಮನೆಯ ಮೇಲೆ ಪಕ್ಷದ ಧ್ವಜಾರೋಹಣ ನರೆವೆರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ರವಿಗೌಡ ಪಾಟೀಲ,ಪಪಂ ಅಧ್ಯಕ್ಷ ಗಣೇಶ ಕೋಕಾಟೆ,ಉಪಾಧ್ಯಕ್ಷ ಹನುಮಂತ ರಣತೂರ,ಮುಖಂಡರಾದ ಈಶ್ವರ ಗಂಗಾಯಿ,ಮಾಲತೇಶ ಶ್ಯಾಗೋಟಿ,ಬಸವರಾಜ ಕೊಪ್ಪದ,ಬಿ ಟಿ ಗಂಗಾಯಿ, ಇದ್ದರು