ರಾಯಚೂರು: ಪಿಎಂಜಿಕೆವೈ ಯೋಜನೆಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತರ ಹೋರಾಟ ನಡೆಸಿದರು. ರಾಯಚೂರ ಜಿಲ್ಲೆಯ ಹಲವೆಡೆ ಪ್ರಿಮಿಯಮ್ ಹಣ ಪಾವತಿಸಿದ ರೈತರಿಗೆ ಪಂಗನಾಮ ಹಾಕಿದ್ದು, ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಸಾವಿರಾರು ರೂಪಾಯಿ ಬೇರೆಯವರ ಖಾತೆಗೆ ವರ್ಗಾವಣೆಯಾಗಿದೆ.
ಖಾಸಗಿ ಏಜೆನ್ಸಿ ಮೂಲಕ ಕೋಟ್ಯಾಂತರ ರೂಪಾಯಿ ರೈತರಿಗೆ ಮೋಸ ಆಗಿದೆ ಎಂದು ರೈತ ಸಂಘದ ಮುಖಂಡ ಚಾಮರಸ ಪಾಟೇಲ್ ಆರೋಪ ಮಾಡಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಚಾಮರಸ ಪಾಟೀಲ್ ಆಗ್ರಹ ಮಾಡಿ ಪ್ರತಿಭಟನೆ ನಡೆಸಿದ್ದಾರೆ.