ಬೆಂಗಳೂರು: ಜಸ್ಟ್ ಗುರಾಯಿಸಿದಕ್ಕೆ ಎಲೆಕ್ಟ್ರಿಕ್ ಶಾಪ್ ಗೆ ಭೂಪನೋರ್ವ ಬೆಂಕಿ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಾಕ್ ಸ್ಟಾವ್ ನಲ್ಲಿ ಘಟನೆ ನಡೆದಿದ್ದು, ರೇಣುಕಾ ಫುಡ್ಸ್ ಮಾಲೀಕನಿಂದ ಬೆಂಕಿ ಹಚ್ಚಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಶುಕ್ರವಾರ ರೇಣುಕಾ ಫುಡ್ಸ್ ಮಾಲೀಕ ಕಿರಣ್ ಕುಮಾರ್,
ಹಾಗೂ ಎಲೆಕ್ಟ್ರಿಕ್ ಶಾಪ್ ಓನರ್ ಬಾಬು ಮಗ ಪಾಜಿಲ್ ಗೆ ಕಿರಿಕ್ ಆಗಿತ್ತು. ಪಾಜಿಲ್ ಜಸ್ಟ್ ನೋಡಿದಕ್ಕೆ ದೈಹಿಕವಾಗಿ ಕೃತ್ಯ ಹೆಸಗಲು ಕಿರಣ್ ಕುಮಾರ್ ಬಂದಿದ್ದ. ಈ ವೇಳೆ ಕಿರಣ್ ಕುಮಾರ್ ಎಲೆಕ್ಟ್ರಿಕಲ್ ಶಾಪ್ ಗೆ ಬೆಂಕಿ ಹತ್ತಿಸಿರುವುದಾಗಿ ಪಾಜಿಲ್ ಆರೋಪಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.