ಬೆಂಗಳೂರು: ಅವರಿಬ್ಬರೂ ಪರಸ್ಪರ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಜೊತೆಯಲ್ಲೇ ಸುತ್ತಾಡಿದರು ಆದರೆ ಈಗ ಯುವಕ ತನ್ನ ಧರ್ಮವನ್ನೇ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಅನ್ಯ ಕೋಮಿನ ಯುವಕ ಅಂತ ತಿಳಿದ ಬಳಿಕ ಈಗ ಯುವತಿ ಪೊಲೀಸ್ ಮೆಟ್ಟಿಲೇರಿದ್ದಾಳೆ.. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಸ್ಟೋರಿ ನೋಡಿ..
ಹೌದು ಇತ್ತೀಚೆಗೆ ದೆಹಲಿ, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆದ ಲವ್ ಜಿಹಾದ್ ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಗಳು ಮಾಸುವ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಲವ್ ಜಿಹಾದ್ ಗಾಳಿ ಬೀಸಿದೆ. ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ವಂಚನೆಗೊಳಗಾಗಿದ್ದು, ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಕಿರಾತಕ ಯುವತಿಯನ್ನ ವಂಚಿಸಿದ್ದಾನೆ. ರೈಮಂಡ್ ಮತ್ತು ಬ್ಲಾಕ್ ಬೇರಿಸ್ ಗಾರ್ಮೆಂಟ್ಸ್ ರಿಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಯುವತಿ ನಗರದಲ್ಲಿ ವಾಸವಾಗಿದ್ದಾರೆ. ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರಾರಂಭದಲ್ಲಿ ಕ್ರಿಶ್ಚಿಯನ್ ಧರ್ಮ ಮೆಲ್ಬಿನ್ ಎಂದು ಹೆಸರು ಹೇಳಿಕೊಂಡು ಯುವತಿಯನ್ನು ಬಲೆಗೆ ಬಿಳಿಸಿದ್ದಾನೆ. ನಯವಂಚಕನ ಮಾತು ನಂಬಿದ ಯುವತಿ ಎರಡು ವರ್ಷದಿಂದ ಪರಸ್ಪರ ಪ್ರೀತಿ, ಒಡನಾಟದಲ್ಲಿದ್ದಾಳೆ. ಈಗಿರುವಾಗ ಒಂದು ದಿನ ಯುವಕನ ಪರ್ಸ್ ನಲ್ಲಿದ್ದ ಆಧಾರ್ ಕಾರ್ಡ್ ಅನ್ನು ಯುವತಿ ಆಕಸ್ಮಿಕವಾಗಿ ತೆಗೆದು ನೋಡಿದಾಗ ಅನ್ಯ ಕೋಮಿನವನು ಎಂಬು ಗೊತ್ತಾಗಿದೆ. ಯುವತಿ ಆತನನ್ನ ಪ್ರಶ್ನೆ ಮಾಡುತ್ತಿದ್ದ ಮುಸ್ಲಿಂ ಎಂದು ತಿಳಿದರೆ ಯುವತಿಯರು ಸ್ನೇಹ ಬೆಳೆಸುವುದಿಲ್ಲ ಅದಕ್ಕಾಗಿ ಕ್ರಿಶ್ಚಿಯನ್ ಎಂದು ಸುಳ್ಳು ಹೇಳಿರೋದಾಗಿ ಬಾಯ್ಬಿಟ್ಟಿದ್ದಾನೆ.
ಇನ್ನು ಅನ್ಯ ಕೋಮು ಎಂದು ತಿಳಿದ ಬಳಿಕ ಮದುವೆ ಸಾದ್ಯವಿಲ್ಲ ಎಂದು ಯುವತಿ ಆತನ ಪ್ರೀತಿಯನ್ನ ತಿರಸ್ಕಾರ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ನಯವಂಚಕ ಯುವತಿಗೆ ಕಿರುಕುಳ ನೀಡಲು ಶುರು ಮಾಡಿಕೊಂಡಿದ್ದಾನೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಮಾಡಿ ಯುವತಿ ಮತ್ತು ಕುಟುಂಬದವರನ್ನ ಮುಗಿಸುವ ಬೆದರಿಕೆ ಹಾಕಿದ್ದಾನೆ. ಪ್ರೀತಿಯ ಹೆಸರಿನಲ್ಲಿ ಯುವತಿ ವಂಚನೆ ಮತ್ತು ಅನ್ಯಾಯಕ್ಕೊಳಗಾಗಿದ್ದು, ಪ್ರಾಣ ರಕ್ಷಣೆ ಮತ್ತು ನ್ಯಾಯಕ್ಕಾಗಿ ಹೆಬ್ಬಗೋಡಿ ಠಾಣೆಯಲ್ಲಿ ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾನ ವಿರುದ್ಧ ದೂರು ದಾಖಲಿಸಿದ್ದಾಳೆ.
ಇನ್ನೂ ತನ್ನ ಧರ್ಮವನ್ನು ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಗೆ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಲ್ಲದೆ. ಯುವತಿಯ ಬಳಿ ಲಕ್ಷಾಂತರ ರೂಪಾಯಿ ಹಣವನ್ನು ಸಹ ಈ ಕಿರಾತಕ ಪಡೆದುಕೊಂಡಿದ್ದ. ಇದೇ ರೀತಿ ಈ ಹಿಂದೆಯೂ ಸಹ ಸಾಕಷ್ಟು ಯುವತಿಯರಿಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾನೆ ಎನ್ನುವ ಆರೋಪಗಳು ಸಹ ಕೇಳಿಬಂದಿವೆ. ಅಷ್ಟೇ ಅಲ್ಲದೆ ಆಕೆ ಕೆಲಸ ಮಾಡುತ್ತಿದ್ದ ಬ್ಲಾಕ್ ಬೇರಿಸ್ ಕಂಪನಿ ಮಾಲೀಕರ ಬಳಿ ಇಲ್ಲಸಲ್ಲದ ಆರೋಪ ಮಾಡಿ ಕೆಲಸ ಮಾಡುತ್ತಿದ್ದ ಯುವತಿಗೆ ಗೇಟ್ ಪಾಸ್ ಕೊಡಿಸಿದ್ದಾನೆ. ಮಾತ್ರವಲ್ಲದೆ ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾ ಯುವತಿ ಜೊತೆ ಕೆಲಸ ಮಾಡುವ ತಮ್ಮ ಕೋಮಿನವರಾದ ಕೆಲವರ ಜೊತೆ ಷಡ್ಯಂತ್ರ ರೂಪಿಸಿ ಯುವತಿಯ ಪ್ರೊಫೆಷನಲ್ ಲೈಪ್ ಹಾಳು ಮಾಡಿದ್ದಾನೆ. ಇಷ್ಟೆಲ್ಲಾ ವಂಚನೆಗಳಿಗೊಳಗಾದ ಯುವತಿ ನ್ಯಾಯಕ್ಕಾಗಿ ವಂಚಕ ಅಲ್ ಮೆಹಪ್ಯೂಸ್ ಬರಪೂಯಾ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಕಂಪನಿ ಆಡಳಿತ ಮಂಡಳಿ ಕಿರುಕುಳ ವಿರುದ್ಧ ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದು, ನ್ಯಾಯಕ್ಕಾಗಿ ಅಸಹಾಯಕ ಹಿಂದೂ ಯುವತಿ ಪರದಾಟ ನಡೆಸುತ್ತಿದ್ದು, ತನಗೆ ರಕ್ಷಣೆ ಮತ್ತು ನ್ಯಾಯ ನೀಡುವಂತೆ ಒತ್ತಾಯಿಸಿದ್ದಾಳೆ
ಒಟ್ನಲ್ಲಿ ಪ್ರೀತಿ ಕುರುಡು ಅಂತಾರೆ, ಆದ್ರೆ ಇಂತಹ ಕಿರಾತಕರು ಪ್ರೀತಿಯ ಬಲೆಗೆ ಬಿದ್ದು, ಅದೆಷ್ಟೋ ಯುವತಿಯರು ದುರಂತ ಅಂತ್ಯ ಕಂಡಿದ್ದಾರೆ. ಆದ್ರೆ ಈ ಯುವತಿ ಸ್ವಲ್ಪದರಲ್ಲಿ ನಯವಂಚಕ ಅಲಿ ಮೆಹಪ್ಯೂಸ್ ಬರಪೂಯಾ ಸಂಚಿನಿಂದ ಬಚಾವ್ ಆಗಿದ್ದು, ನ್ಯಾಯಕ್ಕಾಗಿ ಹೆಬ್ಬಗೋಡಿ ಠಾಣೆ ಮೆಟ್ಟಿಲೇರಿದ್ದಾಳೆ. ಪೊಲೀಸರು ಈ ಬಗ್ಗೆ ತನಿಖೆಯನ್ನ ನಡೆಸಿ ನೊಂದ ಯುವತಿಗೆ ರಕ್ಷಣೆಯ ಜೊತೆಗೆ ಪ್ರೀತಿಯ ಹೆಸರಿನಲ್ಲಿ ಯುವತಿಯರ ಬಾಳಲ್ಲಿ ಚೆಲ್ಲಾಟವಾಡುತ್ತಿರುವ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕಿದೆ..