ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಸಂಜೆ ಶ್ವೇತಭವನದಲ್ಲಿ ಅನಿವಾಸಿ ಭಾರತೀಯರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಹಿಂದಿನ ವರ್ಷಗಳ ಸಂಪ್ರದಾಯದಂತೆ ಅಧ್ಯಕ್ಷರು ಭಾಷಣಕ್ಕೂ ಮುನ್ನಾ ಬ್ಲೂ ರೂಮ್ನಲ್ಲಿ ದೀಪವನ್ನು ಬೆಳಗಿಸುತ್ತಾರೆ ಎಂದು ಶ್ವೇತಭವನ ತಿಳಿಸಿದೆ.
ದೀಪಾವಳಿ ಆಚರಣೆ ಬಳಿಕ ಅನಿವಾಸಿ ಭಾರತೀಯರನ್ನುದ್ದೇಶಿಸಿ ಬೈಡನ್ ಭಾಷಣ ಮಾಡಲಿದ್ದಾರೆ. ಅವರಿಗಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.
ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದ ಕಾರಣ ಇದು ಅಧ್ಯಕ್ಷ ಬೈಡನ್ ಅವರ ಶ್ವೇತಭವನದಲ್ಲಿನ ಕೊನೆಯ ದೀಪಾವಳಿ ಆಚರಣೆಯಾಗಿದೆ. ಅಧ್ಯಕ್ಷರ ಭಾಷಣದ ವೇಳೆ ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ಸುನಿ ವಿಲಿಯಮ್ಸ್ ಅವರ ವೀಡಿಯೊ ಸಂದೇಶವಿದೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವೀಡಿಯೊ ಶುಭಾಶಯವನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದಾರೆ.
ಹಿಂದೂ ಧರ್ಮದ ಸುನೀತಾ ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಪ್ರಪಂಚದಾದ್ಯಂತದ ಜನರಿಗೆ ದೀಪಾವಳಿ ಶುಭಾಶಯಗಳನ್ನು ಕಳುಹಿಸಿದ್ದಾರೆ.