ಬೆಂಗಳೂರು: ಸೌತ್ ಬ್ಯೂಟಿ ಸಮಂತಾ ಸದ್ಯ ಸಿಂಗಲ್ ಆಗಿ ತಮ್ಮ ಲೈಫ್ನ ತಮ್ಮದೇ ಶೈಲಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ. ನಟನೆಯಿಂದ ಬ್ರೇಕ್ ಪಡೆದು ಬಾಲಿಯಲ್ಲಿ ಕಾಲ ಕಾಳೆಯುತ್ತಿದ್ದಾರೆ. ಇದೀಗ ಅವರ ಬಗ್ಗೆ ಹೊಸ ವಿಚಾರವೊಂದು ಹೊರಹಾಕಿದ್ದಾರೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್ ಮತ್ತೆ ಪ್ರೀತಿಯಲ್ಲಿ ಬಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿದೆ ಅದಕ್ಕೆಲ್ಲಾ ಸದ್ಯದಲ್ಲೇ ಉತ್ತರ ನೀಡ್ತೀನಿ ಅಂದಿದ್ದಾರೆ.
ನಟಿ ಸಮಂತಾ ಮೈಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಆರೋಗ್ಯ ಚೇತರಿಕೆಗಾಗಿಯೇ ಒಂದು ವರ್ಷ ನಟಿ ಬ್ರೇಕ್ ಪಡೆದುಕೊಂಡಿದ್ದಾರೆ. ಕಳೆದ ವರ್ಷ ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಮೇಲೆ ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾದರು. ‘ಪುಷ್ಪ’ (Pushpa) ಸಿನಿಮಾ ಸಾಂಗ್, ಯಶೋದ ಸಿನಿಮಾದ ಸಕ್ಸಸ್ ಮೂಲಕ ಸದ್ದು ಮಾಡಿದ್ರು.
ಈಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ನಂತರ ಈಗ ಮತ್ತೆ ಪ್ರೀತಿಯಲ್ಲಿ ಸಮಂತಾ ಬಿದ್ದಿದ್ದಾರಾ ಎಂಬ ಗುಮಾನಿ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಆಗಿರೋದು ಸಮಂತಾರ ನಯಾ ಪೋಸ್ಟ್. ಸಮಂತಾ ಪ್ರೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ನಿಮ್ಮನ್ನು ಹೆಚ್ಚು ದ್ವೇಷಿಸುವವರನ್ನು ನೀವು ನೋಡುತ್ತೀರಿ, ದ್ವೇಷದ ಮಾತುಗಳನ್ನು ಕೇಳುತ್ತೀರಿ, ಆದರೆ ಈ ಜಗತ್ತಿನಲ್ಲಿ ನಾವು ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರೀತಿ ಇದೆ ಎಂದು ಸಮಂತಾ ನೀಡಿದ ಇನಸ್ಟಾ ಸ್ಟೋರಿ ವೈರಲ್ ಆಗುತ್ತಿದೆ.